ಕಮಲಾಪುರ: ‘ಮಾನಸಿಕ ಸ್ಥಿಮಿತೆ, ಏಕಾಗೃತೆ ಹಾಗೂ ಸತತ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್‌ಮೀನಾ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಫೂರ್ತಿ ಕಿರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಾಥಮಿಕ, ಪ್ರೌಢ, ಪದವಿ ಪೂರ್ವದ ಹಂತದ ವರೆಗಿನ ವಿಷಯಗಳೇ ಪದವಿಯಿಂದ ವಿಸ್ತ್ರತಗೊಳ್ಳುತ್ತವೆ. ಈ ಹಂತದಲ್ಲಿ ನಿರಂತರ ಅಭ್ಯಾಸ ಮಾಡಿದರೆ. ನಿಮ್ಮ ತಳಪಾಯ ಗಟ್ಟಿಗೊಳ್ಳುತ್ತದೆ. ಹದಿಹರೆಯದ ಈ ವಯಸ್ಸಿನಲ್ಲಿ ನಿಮ್ಮಲ್ಲಿ ಚಿತ್ತ ಚಂಚಲ ಇರುವುದು ಸಹಜ. ಅದನ್ನು ನಿಗ್ರಹಿಸಬೇಕು ಗುರಿ ಸಾಧನೆಯತ್ತ ಗಮನ ಹರಿಸಬೇಕು. ಮನಸ್ಸಿದ್ದರೆ ಮಾರ್ಗ ತನ್ನಿಂದ ತಾನೆ ಸಿಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಐಎಎಸ್, ಐಪಿಎಸ್ ಮಾಡಿದವರೂ ಸಹ ಗ್ರಾಮೀಣ ಪ್ರದೇಶದಿಂದ ಬಂದಿರುತ್ತಾರೆ. ನಮ್ಮಂತ ಸಾಧನೆ ಮಾಡುವ ಕ್ಷಮತೆ ನಿಮ್ಮಲೂ ಇದೆ. ಅದನ್ನು ಜಾಗೃತಗೊಳಿಸಿ ಪ್ರತಿಯೊಂದು ವಿಷಯದ ಕುರಿತು ಪರಿಪೂರ್ಣರಾಗಿ ಹೊಸ ವಿಷಯಗಳ ತಿಳಿದುಕೊಳ್ಳುವ ಕುತೂಹಲ ಬೆಳೆಸಿಕೊಳ್ಳಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಅಂಬ್ರೇಶ ಪಾಟೀಲ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಶಶಿಕಲಾ ಮಾಲಿ ಪಾಟೀಲ, ಡಯಟ್ ಪ್ರಾಚಾರ್ಯ ಬಸವರಾಜ ಮಾಯಾಚಾರ, ಉಪನ್ಯಾಸಕರಾದ ಯಲ್ಲಪ್ಪ, ಮಲ್ಲಿಕಾರ್ಜುನ ವಾಲಿ, ಸುಭಾಷ, ಶ್ರೀದೇವಿ ಮೇತ್ರಿ, ಹಣಮಂತ ಬೇನಾಳ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.