ಅಫಜಲಪುರ: ಶಿಕ್ಷಕರ ಸೇವಾ-ಸಂಬಂಧಿತ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ ನಡೆಸುವ ಗುರು ಸ್ಪಂದನ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ನಡೆದಿಲ್ಲ.ಹೀಗಾಗಿ ಶಿಕ್ಷಕರ ಸಮಸ್ಯೆಗಳು ಪರಿಹಾರ ಇಲ್ಲದಂತಾಗಿದೆ ಮತ್ತು ಪರೋಕ್ಷವಾಗಿ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ.

ಶಿಕ್ಷಕರು ತಮ್ಮ ಸಮಸ್ಯೆಗಳನ್ನು ತಿಳಿಸಲು ಕಚೇರಿಗಳಿಗೆ ಅಲೆದಾಡುವ ಬದಲು, ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಪಡೆಯಲು ಗುರು ಸ್ಪಂದನೆ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ. ಸೇವಾ ಪುಸ್ತಕದಲ್ಲಿ ಅಗತ್ಯ ವಿಷಯಗಳ ಸೇರ್ಪಡೆ ಮತ್ತು ತಿದ್ದುಪಡಿ ಇದರ ಉದ್ದೇಶವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಗುರು ಸ್ಪಂದನ ಕಾರ್ಯಕ್ರಮ ಮಾಡದೇ ಇರುವುದರಿಂದ ಶಿಕ್ಷಕರ ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಇಲ್ಲದವಾಗಿ, ನಿತ್ಯ ಕಷ್ಟಪಡುವಂತಾಗಿದೆ.

‘ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ಇಂದು ಶನಿವಾರ ಪಟ್ಟಣದ ನ್ಯಾಷನಲ್ ಪಂಕ್ಷನ್ ಹಾಲದಲ್ಲಿ ಅದ್ದೂರಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.ಆದರೆ ಕಳೆದ ಎರಡು ವರ್ಷಗಳಿಂದ ಕ್ಷೆತ್ರ ಶಿಕ್ಷಣಾಧಿಕಾರಿಗಳು ಗುರು ಸ್ಪಂದನೆ ಕಾರ್ಯಕ್ರಮ ಮಾಡದೇ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆ ಮಾಡುವುದು ಎಷ್ಟು ಸೂಕ್ತ’ ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.

ಖಾಯಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಸ್ಯೆ:

ಕಳೆದ ಎರಡು ವರ್ಷಗಳಿಂದ ಖಾಯಂ ಬಿಇಒ ಇಲ್ಲ. ಇದರಿಂದ ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಶಿಕ್ಷಕರ ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣಾಧಿಕಾರಿ ಚಿತ್ರಶೇಖರ್ ದೇಗಲಮಡಿ ವರ್ಗವಾಗಿ ಹೋದ ನಂತರ ಇಲ್ಲಿಯವರೆಗೆ ಸುಮಾರು ನಾಲ್ಕು ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕರ್ತವ್ಯ ನಿರ್ವಹಿಸಿ ವರ್ಗವಾಗಿ ಹೋಗಿದ್ದಾರೆ. ಸದ್ಯಕ್ಕೆ ಯುವರಾಜ್ ಗಾಡಿ ಎಂಬವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಶಿಕ್ಷಣದ ಮಹತ್ವ ಕುರಿತು ಮಾತನಾಡುವ ಜನಪ್ರತಿನಿಧಿಗಳು ಒಬ್ಬ ಒಳ್ಳೆಯ ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕ ಮಾಡುವಂತಹ ಕೆಲಸ ಮಾಡಬೇಕಾಗಿದೆ’ ಎನ್ನುತ್ತಾರೆ ಮಕ್ಕಳ ಪಾಲಕರು.

ನಾನು ಈಚೆಗೆ ವರ್ಗವಾಗಿ ಬಂದಿದ್ದೇನೆ ಸದ್ಯಕ್ಕೆ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ನಡೆದಿರುವುದರಿಂದ ಶಿಕ್ಷಕರ ದಿನಾಚರಣೆ ಮುಗಿದ ಮೇಲೆ ಗುರು ಸ್ಪಂದನ ಕಾರ್ಯಕ್ರಮ ಮಾಡುವ ಯೋಚನೆ ಇದೆ
ಯುವರಾಜ್ ಗಾಡಿ ಕ್ಷೆತ್ರ ಶಿಕ್ಷಣಾಧಿಕಾರಿಗಳು.

ವರ್ಷಕ್ಕೊಮ್ಮೆ ಕ್ಷೆತ್ರ ಶಿಕ್ಷಣಾಧಿಕಾರಿಗಳು ಕಚೇರಿಯವರು ಗುರುಸ್ಪಂದನೆ ಕಾರ್ಯಕ್ರಮ ಏರ್ಪಡಿಸಿಲ್ಲ. ಹೀಗಾಗಿ ಶಿಕ್ಷಕರು ಕೆವಿನಾಕಾರಣ ಕಚೇರಿಗೆ ಅಲೆದಾಡುವಂತಾಗಿದೆ.
ಸಂಜು ಬಗಲಿ ಶಿಕ್ಷಕ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.