ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ ಪಟ್ಟಣ ಸೌಂದರೀಕರಣಕ್ಕೆ ಆದ್ಯತೆ: ಎಂ.ವೈ.ಪಾಟೀಲ್

Published 7 ಆಗಸ್ಟ್ 2023, 16:21 IST
Last Updated 7 ಆಗಸ್ಟ್ 2023, 16:21 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ಮೂಲ ಸೌಲಭ್ಯಗಳು ಹೆಚ್ಚಾಗಬೇಕು. ಅದಕ್ಕಾಗಿ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಚರಂಡಿ ವ್ಯವಸ್ಥೆ ಜತೆಗೆ ಪಟ್ಟಣವನ್ನು ಸೌಂದರೀಕರಣ ಮಾಡಲಾಗುವುದು ಎಂದು ಶಾಸಕ ಎಂ ವೈ ಪಾಟೀಲ್ ತಿಳಿಸಿದರು

ಪಟ್ಟಣದ ಪ್ರವಾಸಿ ಮಂದಿರದ ಎದುರು ಸೋಮವಾರ 2022-23ನೇ ಸಾಲಿನ ಅಮೃತ ನಗರೋತ್ಥಾನ ಹಂತ-4ರ ಯೋಜನೆ ಅಡಿ ಮಂಜೂರಾದ ಪಟ್ಟಣದ ವಿವಿಧ ವಾರ್ಡ್‌ಗಳ ಸಿ.ಸಿ.ರಸ್ತೆ, ಚರಂಡಿ ಹಾಗೂ ಹೈಮಾಸ್ಟ್‌ ದೀಪ, ರಸ್ತೆ ಡಿವೈಡರ್ ₹ 4.35 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಪಟ್ಟಣಕ್ಕೆ ಶಾಶ್ವತ  ಮತ್ತು ಶುದ್ಧವಾದ ಕುಡಿಯುವ ನೀರು ಪೂರೈಕೆಗಾಗಿ ಭೀಮಾ ಬ್ಯಾರೇಜ್‌ನಲ್ಲಿ ಕೈಗೊಂಡಿರುವ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆಗಾಗಿ  ಪ್ರಸ್ತಾವ ಸಲ್ಲಿಸಲಾಗಿದೆ. ಪಟ್ಟಣದ ರಸ್ತೆಗಳನ್ನು ವಿಸ್ತರಣೆ ಮಾಡಲು ಚಾಲನೆ ನೀಡಲಾಗಿದೆ. ರಸ್ತೆ ಅಕ್ಕಪಕ್ಕದ ವ್ಯಾಪಾಸ್ಥರು ಸಹಕಾರ ನೀಡಬೇಕು. ರಸ್ತೆ ವಿಸ್ತರಣೆಯಾದರೆ ಎಲ್ಲರಿಗೂ ಅನುಕೂಲ ಎಂದು ಅವರು ತಿಳಿಸಿದರು.

ಪುರಸಭೆಯ ಮುಖ್ಯಾಧಿಕಾರಿ ವಿಜಯ ಮಾಂತೇಶ್ ಹೂಗಾರ್ ಮಾತನಾಡಿ, ರಸ್ತೆ ವಿಸ್ತರಣೆ ಕಾಮಗಾರಿಗೆ ಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ. ಪಟ್ಟಣದ ಕೇದಾರ ಪೆಟ್ರೋಲ್ ಬಂಕ್‌ದಿಂದ ತಹಶೀಲ್ದಾರ್‌ ಕಚೇರಿವರೆಗೆ ರಸ್ತೆ ವಿಸ್ತರಣೆ  ಮಾಡಲಾಗುವುದು.ಈ ಕುರಿತು ಈಗಾಗಲೇ ಬೀದಿ ಬಳಿಯ ವ್ಯಾಪಾರಸ್ಥರಿಗೆ ಮಾಹಿತಿ ನೀಡಲಾಗಿದೆ. ಅದಕ್ಕೆ ಅವರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಜಿ.ಪಂ ಮಾಜಿ ಸದಸ್ಯರಾದ ಸಿದ್ಧಾರ್ಥ ಬಸರಿಗಿಡದ, ತಾ.ಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿ ಸಾಹುಕಾರ, ಪುರಸಭೆ ಸದಸ್ಯರಾದ ರೇಣುಕಾ ರಾಜು ಪಾಟೀಲ, ಚಂದು ದೇಸಾಯಿ, ಬಿಲ್ಲಂರಾಜಾ ಮ್ಯಾಳೇಸಿ, ಬಿಂಗು ಚಲವಾದಿ, ಶಿವು ಪದಕಿ, ರವಿ ನಂದಶೆಟ್ಟಿ, ಯಮನಪ್ಪ ಭಾಸಗಿ, ವಿಶ್ವನಾಥ ಮಲಗಣ, ಖಾಸೀಂ ಮುಜಾವಾರ, ಹಾಜಿ ಮುಜಾವಾರ, ಶಿರಾಜ ಫೀರವಾಲೆ, ಮುಖಂಡರಾದ ಶಿವಪುತ್ರಪ್ಪ ಸಂಗೋಳಗಿ, ಕಂಠೆಪ್ಪಾ ಜಮಾದಾರ, ಪ್ರಕಾಶ ಜಮಾದಾರ, ಮೊಶಿನ ಪಟೇಲ, ಪಪ್ಪು ಪಟೇಲ, ಪಪ್ಪು ಪಟೇಲ, ತಿಪ್ಪಣ್ಣ ಗಾಡಿವಡ್ಡರ, ಕಾಂತು ಮ್ಯಾಳೇಸಿ, ಚಂದ್ರು ಕರಜಗಿ, ಎಂ.ಎಲ್. ಪಟೇಲ, ಫಿರೋಜ ಜಾಗೀರದಾರ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT