ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ರಸ್ತೆ, ಭವನಗಳಿಗೆ ಸೀಮಿತ ಶಾಸಕರ ನಿಧಿ

Last Updated 8 ಅಕ್ಟೋಬರ್ 2021, 5:12 IST
ಅಕ್ಷರ ಗಾತ್ರ

ಆಳಂದ: ಶಾಸಕ ಸುಭಾಷ ಗುತ್ತೇದಾರ ಅವರು, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಬಹುತೇಕ ಅನುದಾನವನ್ನು ತಾವು ಪ್ರತಿನಿಧಿಸುವ ಆಳಂದ ಕ್ಷೇತ್ರದಲ್ಲಿನ ರಸ್ತೆ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಒದಗಿಸಿದ್ದಾರೆ.

ಆಳಂದ ಕ್ಷೇತ್ರಕ್ಕೂ ಕೋವಿಡ್ ಕಾರಣದಿಂದ ಶಾಸಕರ ಅನುದಾನ ಕಡಿತವಾಗಿದ್ದು, ಕ್ಷೇತ್ರಕ್ಕೆ ಬರಬೇಕಾದಸುಮಾರು ₹ 2 ಕೋಟಿಯಷ್ಟು ಅನುದಾನ ಸೋಂಕು ನಿಯಂತ್ರಣಕ್ಕೆ ಬಳಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ₹ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಬಹುತೇಕ ಹಣ ಕ್ಷೇತ್ರದ ವಿವಿಧೆಡೆ ರಸ್ತೆ ಸುಧಾರಣೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬಳಕೆಯಾಗಿದೆ.

2018–19ರಲ್ಲಿ ₹1 ಕೋಟಿ ಅನುದಾನ ಬಂದಿತ್ತು. ಇದರಲ್ಲಿ ಬಹುತೇಕ ಅನುದಾನ ರಸ್ತೆ ಸುಧಾರಣೆಗೆ ವ್ಯಯಿಸಲಾಗಿದೆ. ಜತೆಗೆ ಬೊಮ್ಮನಳ್ಳಿ, ಮಾಡಿಯಾಳ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.

2019–20ನೇ ಸಾಲಿನಲ್ಲಿ ಬಂದಿದ್ದ ₹1ಕೋಟಿ ಅನುದಾನದಲ್ಲಿ ನಸೀರವಾಡಿ ಗ್ರಾಮದಲ್ಲಿ ₹32 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ, ತೀರ್ಥ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ನಿರ್ಮಾಣ ಹಾಗೂ ಖಂಡಾಳ, ತಡೋಳಾ, ಬಬಲೇಶ್ವರ, ರುದ್ರವಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಿದೆ.

2020–21ರಲ್ಲಿ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮಟಕಿ ಗ್ರಾಮದ ಸಮುದಾಯ ಭವನಕ್ಕೆ ₹20 ಲಕ್ಷ ಹಾಗೂ ಆಳಂದ ಪಟ್ಟಣದ ವಾಸುದೇವ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಮೀಸಲಿಡಲಾಗಿದೆ. ಮೋಘಾ(ಕೆ) ಗ್ರಾಮದಲ್ಲಿ ಎಸ್‌ಇಪಿ ಯೋಜನೆಯಡಿ ಜಟಿಂಗರಾಯನ ದೇವಸ್ಥಾನ ನಿರ್ಮಾಣಕ್ಕೆ ₹13 ಲಕ್ಷ ಹಾಗೂ ಝಳಕಿ(ಕೆ) ಪಾರ್ಧಿ ತಾಂಡಾದಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗಿದೆ. ಹಿತ್ತಲ ಶಿರೂರು ಹಾಗೂ ರುದ್ರವಾಡಿ ಗ್ರಾಮದ ಭೀಮನಗರದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮವಾಗಿ₹15 ಲಕ್ಷ ಹಾಗೂ ₹13 ಲಕ್ಷ ನೀಡಲಾಗಿದೆ.

ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿನ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲವು ಮಾತ್ರವೇ ಪೂರ್ಣಗೊಂಡಿವೆ. ಉಳಿದವು ಪ್ರಗತಿಯ ಹಂತದಲ್ಲಿವೆ.

ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಅನುದಾನ ಹೆಚ್ಚಿಸಬೇಕು. ಮೊದಲ ವರ್ಷದಲ್ಲಿ ₹1ಕೋಟಿ ಮಾತ್ರ ಅನುದಾನ ಬಂದಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ವಿವಿಧ ಯೋಜನೆಗಳಡಿ ಅನುದಾನವು ಬರುತ್ತಿದೆ. ಆದರೆ, ಶಾಸಕರ ನಿಧಿಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬಳಕೆ ಮಾಡಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*

ಕೋವಿಡ್‌ನಿಂದ ಎರಡು ವರ್ಷ ಶಾಸಕರ ನಿಧಿಯ ಅನುದಾನವು ಸೋಂಕು ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಪ್ರತಿ ವರ್ಷ ಬಂದ ₹1 ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.
-ಸುಭಾಷ ಗುತ್ತೇದಾರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT