ಆಳಂದ: ಕಲಬುರಗಿ, ಬೀದರ್ ಹಾಗೂ ಯಾದಗಿರಿಯ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಅವರ 52ನೇ ಜನ್ಮದಿನದ ಪ್ರಯುಕ್ತ ಫೆ.17ರಂದು ಬೆಳಿಗ್ಗೆ 10ಕ್ಕೆ ಆಳಂದ ಪಟ್ಟಣದ ಡಾ.ರಾಮ ಮನೋಹರ ಲೋಹಿಯಾ ಪಿಯು ಕಾಲೇಜಿನ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಸಿದ್ದುಗೌಡ ಪಾಟೀಲ ಗುಳ್ಳೋಳ್ಳಿ, ಪಾಶಾ ಗುತ್ತೇದಾರ ಜಂಟಿಯಾಗಿ ತಿಳಿಸಿದರು.

ಕಲಬುರಗಿ ಬಸವೇಶ್ವರ ಆಸ್ಪತ್ರೆ ಮತ್ತು ಸಮತಾ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಈ ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರ ತಂಡದಿಂದ ಕ್ಯಾನ್ಸರ್ ಸಂಬಂಧಿಸಿದ ತಪಾಸಣೆ, ನೇತ್ರ ತಪಾಸಣೆ, ಹೃದಯ ಸಂಬಂಧಿಸಿದ ಸಮಸ್ಯೆ, ಕಿಡ್ನಿ ಸ್ಟೋನ್, ಮೂಲವ್ಯಾಧಿ, ಮೊಳಕಾಲು ನೋವು, ಚರ್ಮರೋಗ, ಸ್ತ್ರೀ ಸಂಬಂಧಿಸಿದ ಕಾಯಿಲೆಗಳು, ರಕ್ತಹೀನತೆ, ಪಾರ್ಶ್ವವಾಯು ರೋಗಕ್ಕೆ ತಪಾಸಣೆ ನಡೆಸಿ, ಅಗತ್ಯ ಔಷಧ, ಚಿಕಿತ್ಸೆ ಸ್ಥಳದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಆರ್.ಕೆ.ಪಾಟೀಲ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರವು ಏರ್ಪಡಿಸಲಾಗಿದೆ. ತಾಲ್ಲೂಕಿನ ಜನತೆಯು ಬೃಹತ್ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಅವರು ಮನವಿ ಮಾಡಿದರು.

ಮುಖಂಡರಾದ ಮಲ್ಲಪ್ಪ ಹತ್ತರಕಿ, ಇಕ್ರಮ್ ಅನ್ಸಾರಿ, ಮಲ್ಲಿಕಾರ್ಜುನ ಬೋಳಣಿ, ತೈಬಲಿ ಶೇಖ, ಪ್ರಕಾಶ ಫುಲಾರೆ, ರಾಮಣ್ಣಾ ಸುತಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.