ಚಿತ್ತಾಪುರ: ತಾಲ್ಲೂಕಿನ ಮಾಡಬೂಳ ಕ್ರಾಸ್ ಹತ್ತಿರ ಅಕ್ರಮ ಮದ್ಯ ಸಾಗಾಟ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಮಂಗಳವಾರ ಮದ್ಯ ಮತ್ತು ಬೈಕ್ ಜಪ್ತಿ ಮಾಡಿದ್ದಾರೆ.

34.56 ಲೀಟರ್ ಸ್ವದೇಶಿ ಮದ್ಯದ 4 ಬಾಕ್ಸ್, 15.84 ಲೀಟರ್ ಬಿಯರ್ ಇರುವ 2 ಬಾಕ್ಸ್ ಸಹಿತ ಮದ್ಯ ಸಾಗಾಟ ಮಾಡುತ್ತಿದ್ದ ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.

ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಅಬಕಾರಿ ನಿರೀಕ್ಷಕ ರಮೇಶ ಬಿರಾದಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಶಿವಾನಂದ ಐನಾಪುರ, ಶರಣಬಸಪ್ಪ ಪಾಟೀಲ, ನಾಗರಾಜ, ಸುಭಾಷ, ಮಲ್ಲು ಭಾಗವಹಿಸಿದ್ದರು. ಆರೋಪಿ ಪತ್ತೆಗೆ ಶೋಧ ನಡೆಯುತ್ತಿದೆ. ಪಟ್ಟಣದ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.