ಸೋಮವಾರ, ಜೂನ್ 21, 2021
29 °C

ಬೆಂಕಿಗೆ ಆಹುತಿಯಾದ ಆಂಬುಲೆನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್ (ಕಲಬುರ್ಗಿ ಜಿಲ್ಲೆ): ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ಕಾಗಿಣಾ ಸೇತುವೆ ಬಳಿಯ ರಘೋಜಿ ಕಾರ್ಖಾನೆಯ ಮುಂಭಾಗದಲ್ಲಿ 108 ಆಂಬುಲೆನ್ಸ್ ಬೆಂಕಿ ಹೊತ್ತಿ ಉರಿದ ಘಟನೆ ಶನಿವಾರ ನಡೆದಿದೆ.

ಚಿತ್ತಾಪುರ ಸರ್ಕಾರಿ ಆಸ್ಪತ್ರೆಯ ಅಂಬುಲೆನ್ಸ್ ಎಂಟು ಆಮ್ಲಜನಕದ ಖಾಲಿ ಜಂಬೊ ಸಿಲಿಂಡರ್‌ಗಳನ್ನು ಹೊತ್ತು ಚಿತ್ತಾಪುರದಿಂದ ಕಲಬುರ್ಗಿಗೆ ತುಂಬಿಕೊಳ್ಳಲು ಹೊರಟಿತ್ತು. ಮಾರ್ಗ ಮಧ್ಯೆ ಶಂಕರವಾಡಿ ಸಮೀಪದ ರಘೋಜಿ ಕಾರ್ಖಾನೆಯ ಬಳಿ ಆಕಸ್ಮಿಕವಾಗಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತಕ್ಷಣವೇ ಚಾಲಕ, ನರ್ಸ್‌, ಒಬ್ಬ ಆಸ್ಪತ್ರೆಯ ಸಿಬ್ಬಂದಿ ವಾಹನದಿಂದ ಕೆಳಗಿಳಿದಿದ್ದಾರೆ. ಆಂಬುಲೆನ್ಸ್‌ ಮುಂಭಾಗದಲ್ಲಿ ವ್ಯಾಪಕವಾಗಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳಕ್ಕೆ ಬಂದ ಪಿಎಸ್‌ಐ ತಿರುಮಲೇಶ, ಎಎಸ್‌ಐಗಳಾದ ವೆಂಕಟೇಶ, ಅಶೋಕ ಕಟ್ಟಿ ರಸ್ತೆಯಲ್ಲಿ ಬರುವ ವಾಹನಗಳನ್ನು ದೂರವೇ ನಿಲ್ಲಿಸಿದ್ದಾರೆ. ಅಲ್ಲದೇ, ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದಾರೆ. ತಕ್ಷಣವೇ ಚಿತ್ತಾಪುರ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಆಂಬುಲೆನ್ಸ್ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು