24 ವಿರಳ ಕಲಾಕೃತಿಗಳ ಪ್ರದರ್ಶನ
ರಾಮಕಿಂಕರ ಬೈಜ್ ಕೆ.ಜಿ.ಸುಬ್ರಮಣ್ಯಂ ಸುಹಾಸ ರಾಯ್ ಪಿನಾಕಿ ಬರುವಾದಂಥ ಹಲವು ಖ್ಯಾತನಾಮ 24 ಕಲಾವಿದರ ತಲಾವೊಂದು ಕಲಾಕೃತಿಯನ್ನು ಅನುಚಂದ್ರ ಕಂಟೆಂಪ್ರರಿ ಆರ್ಟ್ ಸ್ಟುಡಿಯೊದಲ್ಲಿ ಪ್ರದರ್ಶಿಸಲಾಗಿದೆ. ವುಡ್‌ಕಟ್ ಎಚಿಂಗ್ ಜಿಂಕ್ ಪ್ಲೇಟ್ ಸೆರಿಗ್ರಾಫಿ (ಸ್ಕ್ರೀನ್ ಪ್ರಿಂಟ್) ಮಾಧ್ಯಮಗಳಲ್ಲಿರುವ ಕಲಾಕೃತಿಗಳು ನೋಡುಗರ ಮನಸೆಳೆಯುತ್ತಿವೆ. ಈ ಅಮೂಲ್ಯ ಕಲಾಕೃತಿಗಳ ಪ್ರದರ್ಶನ ಏಪ್ರಿಲ್ 30ರ ತನಕ ನಡೆಯಲಿದೆ. ಆಸಕ್ತರು ಇವುಗಳನ್ನು ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆ ತನಕದ ಅವಧಿಯಲ್ಲಿ ಕಣ್ತುಂಬಿಕೊಳ್ಳಬಹುದು.