ಬುಧವಾರ, ಜುಲೈ 28, 2021
28 °C

ಕಲಬುರ್ಗಿ: ಎಪಿಎಂಸಿ ವಹಿವಾಟು ಸ್ಥಗಿತ ಜುಲೈ 14ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ಎಪಿಎಂಸಿ ಪ್ರಾಂಗಣದಲ್ಲಿಯ ವ್ಯಾಪಾರಕ್ಕೆ ಶೇ 1ರಷ್ಟು ಸೆಸ್‌ ವಿಧಿಸುವ ಹಾಗೂ ಎಪಿಎಂಸಿ ಪ್ರಾಂಗಣದ ಹೊರಗಿನ ವ್ಯವಹಾರಗಳಿಗೆ ಸೆಸ್‌ ವಿಧಿಸದಿರುವ ಸರ್ಕಾರದ ಕ್ರಮ ವಿರೋಧಿಸಿ ಜುಲೈ 14ರಿಂದ ಅನಿರ್ಧಿಷ್ಟ ಅವಧಿ ವರೆಗೆ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಈ ಜಿಲ್ಲೆಗಳ ಎಲ್ಲ ಎಪಿಎಂಸಿಗಳ ವಹಿವಾಟು ಸ್ಥಗಿತಗೊಳಿಸಲು  ಸೋಮವಾರ ಇಲ್ಲಿಯ ನಡೆದ ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘ ಹಾಗೂ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

‘ಮಧ್ಯಪ್ರದೇಶ, ಹರಿಯಾಣ ರಾಜ್ಯಗಳ ಎಪಿಎಂಸಿ ವರ್ತಕರು ಚಳವಳಿ ಆರಂಭಿಸಿದ್ದಾರೆ. ರಾಜ್ಯದ ವಿಜಯಪುರ, ತಾಳಿಕೋಟೆ, ಶಿವಮೊಗ್ಗ, ಸಾಗರ, ಚಿಕಮಗಳೂರು, ಹುಬ್ಬಳ್ಳಿ, ಚನ್ನಗಿರಿ, ಭೀಮಸಮುದ್ರ, ಯಲ್ಲಾಪುರ, ಶಿರಸಿ ಮತ್ತು ರಾಣೆಬೆನ್ನೂರು ಎಪಿಎಂಸಿಗಳ ವರ್ತಕರೂ ಸಹ ಪ್ರತಿಭಟನೆಗೆ ಮುಂದಾಗಿದ್ದಾರೆ’ ಎಂದು ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ  ಅಮರನಾಥ ಸಿ. ಪಾಟೀಲ, ಕಲಬುರ್ಗಿಯ ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ ಘಂಟಿ ಹೇಳಿದರು.

ಬಸವರಾಜ ತಡಕಲ್, ಶಶಿಕಾಂತ ಬಿ. ಪಾಟೀಲ, ರವಿಕುಮಾರ ಎಸ್. ಸರಸಂಬಿ, ಸಂತೊಷಕುಮಾರ ಜಿ. ಲಂಗರ ಸಭೆಯಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು