ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯಕ್ರಿಯೆ ನಡೆಸಿ ಮರಳುವಾಗ ಆಟೊ ಪಲ್ಟಿ: ಮಹಿಳೆ ಸಾವು, ಐದು ಮಂದಿಗೆ ಗಾಯ

Published 18 ಜೂನ್ 2023, 16:07 IST
Last Updated 18 ಜೂನ್ 2023, 16:07 IST
ಅಕ್ಷರ ಗಾತ್ರ

ಚಿಂಚೋಳಿ: ಅಟೊ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಸಹಿತ ಐದು ಜನ ಗಾಯಗೊಂಡ ಘಟನೆ ತಾಲ್ಲೂಕಿನ ಚಿಮ್ಮನಚೋಡ ಬಳಿ ಭಾನುವಾರ ನಡೆದಿದೆ.

ಕಮಲಾಪುರ ತಾಲ್ಲೂಕಿನ ಆಡಕಿ ಮೋಕ ತಾಂಡಾದ ಶಾಂತಾಬಾಯಿ ಕಾಶಿರಾಮ ರಾಠೋಡ (56) ಮೃತರು. ಚಿಂಚೋಳಿ‌ ತಾಲ್ಲೂಕಿನ ಧರ್ಮಾಸಾಗರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್‌ ಹೋಗುವಾಗ ಚಿಮ್ಮನಚೋಡ ಬಳಿಯ ಮಹಿಶಮ್ಮನ ಗುಡಿ ಸಮೀಪ‌ ಆಟೊ ಪಲ್ಟಿಯಾಗಿದೆ. ಅಮರೇಶ ಗೋಪು ರಾಠೋಡ(ಅಟೊ ಚಾಲಕ) ಸಹಿತ ಇತರ ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಲಬುರಗಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಟೊ ಕಂದಕಕ್ಕೆ ಉರುಳಿದ್ದರಿಂದ ಅಟೊದಲ್ಲಿ ಮಹಿಳೆಯೊಬ್ಬಳ ಕಣ್ಣಿಗೆ ಕಟ್ಟಿಗೆ ಚುಚ್ಚಿವೆ. ಇತರರಿಗೂ ಗಂಭೀರ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಸಬ್ ಇನಸ್ಪೆಕ್ಟರ್ ಮಂಜುನಾಥರಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT