ಕಲಬುರಗಿ: ಉರ್ದು ದಿನಪತ್ರಿಕೆ ಸಲಾಮತಿಯ ಸಂಸ್ಥಾಪಕ, ಹಿರಿಯ ಪತ್ರಕರ್ತ ಎಂ.ಎ. ಹಕೀಮ್ ಶಾಕೀರ್ ಅವರಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಮುಹಿಬ್ಬನ್ ಇ ಹಕೀಮ್ ಶಾಕೀರ್’ ಸಂಘಟನೆಯ ವತಿಯಿಂದ ಅವರ ಅಭಿಮಾನಿಗಳು ₹ 1.25 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಕಳೆದ 55 ವರ್ಷಗಳಿಂದ ಉರ್ದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹಕೀಮ್ ಶಾಕೀರ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕಿ ಖನೀಜ್ ಫಾತಿಮಾ, ‘ಸುದೀರ್ಘ ಅವಧಿಯವರೆಗೆ ಉರ್ದು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಶಾಕೀರ್ ಅವರ ಅಪ್ರತಿಮ ಸಾಧನೆಯಾಗಿದೆ’ ಎಂದು ಶ್ಲಾಘಿಸಿದರು.
ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಹಾಬ್ ಅಂದಾಲೀಬ್, ಪತ್ರಕರ್ತರಾದ ಹಮೀದ್ ಅಕ್ಮಲ್, ಡಾ. ಮಜೀದ್ ಡಾಗಿ, ಶಹನವಾಜ್ ಹುಸೇನ್, ಶಾಹೀನ್. ಡಾ. ಅಥರ್ ಮೊಯಿಜ್, ಎಂಜಿನಿಯರ್ ಅಕ್ರಂ ನಖ್ಖಾಷ್, ಮೌಲಾನಾ ನೋಹ್ ಸೇರಿದಂತೆ ಇತರರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.