ಕಲಬುರಗಿ: ‘ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,76,844 ವಸತಿ ರಹಿತರು ಹಾಗೂ ಒಟ್ಟು 36,150 ನಿವೇಶನ ರಹಿತರಿದ್ದಾರೆ’ ಎಂದು ವಸತಿ ಸಚಿವ ಬಿ.ಜೆಡ್.ಜಮೀರಅಹ್ಮದ್ ಖಾನ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು ಕೇಳಿದ ಚುಕ್ಕೆ ಗುರುತ್ತಿಲ್ಲ ಪ್ರಶ್ನೆಗೆ(ಪ್ರಶ್ನೆ ಸಂಖ್ಯೆ 158) ಲಿಖಿತವಾಗಿ ಸಚಿವ ಈ ಉತ್ತರ ನೀಡಿದ್ದಾರೆ.
‘ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 82,850 ವಸತಿ ರಹಿತರು ಹಾಗೂ ಒಟ್ಟು 9,755 ನಿವೇಶನ ರಹಿತರಿದ್ದಾರೆ’ ಎಂದು ವಿವರಿಸಿದ್ದಾರೆ.
‘ಈ ಅಂಕಿ–ಅಂಶಗಳು ಗ್ರಾಮೀಣ ಪ್ರದೇಶದಲ್ಲಿ 2018ರಲ್ಲಿ ಮಾಡಲಾದ ಸಮೀಕ್ಷೆ ಹಾಗೂ ನಗರ ಪ್ರದೇಶದಲ್ಲಿ 2016–17ರಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ವಸತಿ ರಹಿತ ಹಾಗೂ ನಿವೇಶನ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸುವುದಕ್ಕಾಗಿ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮದಿಂದ ರಾಜ್ಯ ಪುರಸ್ಕೃತ ಐದು ಯೋಜನೆಗಳು, ಕೇಂದ್ರ ಪುರಸ್ಕತ ಎರಡು ಯೋಜನೆಗಳು ಹಾಗೂ ಮುಖ್ಯಮಂತ್ರಿ ಗ್ರಾಮೀಣ–ನಗರ ನಿವೇಶನ ಯೋಜನೆಯಡಿ ಕ್ರಮವಹಿಸಿದೆ’ ಎಂದು ಸಚಿವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.