ಜೀವನಕ್ಕೆ ವಚನಗಳೇ ಸ್ಫೂರ್ತಿ: ಕುಲಪತಿ ಡಾ. ನಿರಂಜನ ನಿಷ್ಠಿ

ಶುಕ್ರವಾರ, ಮೇ 24, 2019
29 °C

ಜೀವನಕ್ಕೆ ವಚನಗಳೇ ಸ್ಫೂರ್ತಿ: ಕುಲಪತಿ ಡಾ. ನಿರಂಜನ ನಿಷ್ಠಿ

Published:
Updated:
Prajavani

ಕಲಬುರ್ಗಿ: ‘ನಮ್ಮ ಜೀವನಕ್ಕೆ ಬಸವಣ್ಣವನರ ವಚನಗಳು ಸ್ಫೂರ್ತಿಯಾಗಿವೆ. ಬಸವಣ್ಣನವರ ವಚನಗಳನ್ನು ಅನುಸರಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯ ಆವರಣದ ಅನುಭವ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶ ಅಭಿವೃದ್ಧಿ ಹೊಂದಲು ಜಾತಿ, ಧರ್ಮದಿಂದ ಮಾತ್ರ ಸಾಧ್ಯವಿಲ್ಲ. ಬಸವಣ್ಣನವರ ತತ್ವವಾದ ಕಾಯಕವೇ ಕೈಲಾಸ ಎಂಬ ವಚನದ ಸಾರವನ್ನು ಅರ್ಥೈಸಿಕೊಂಡು, ಕಾಯಕದಲ್ಲಿ ನಿರತರಾದಾಗ ಮಾತ್ರ ಅಭಿವೃದ್ಧಿ ಹೊಂದುತ್ತದೆ. ಮುಂದುವರೆದ ದೇಶಗಳು ವಿಶ್ವಮಾನವನ ತತ್ವಗಳನ್ನು ಪಾಲಿಸುವ ಮೂಲಕ ಆರ್ಥಿಕವಾಗಿ ಸದೃಢತೆ ಸಾಧಿಸಿವೆ’ ಎಂದು ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಜಯಂತಿಗಳ ಆಚರಣೆ ಹೆಚ್ಚುತ್ತಿದೆ. ನಾವೆಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತಿಗಳ ಆಚರಣೆಯಲ್ಲಿ ನಿರತರಾಗುವ ಬದಲಿಗೆ, ಅವರ ತತ್ವಗಳನ್ನು ಪಾಲಿಸುವಲ್ಲಿ ನಿರತರಾಗಬೇಕು’ ಎಂದರು.

ಕನ್ನಡ ವಿಭಾಗದ ಪ್ರಾಧ್ಯಾಪಕ ನಾನಾಸಾಹೇಬ್, ಡಾ. ಸುಮಂಗಲಾ ರೆಡ್ಡಿ, ವಿದ್ಯಾರ್ಥಿ ರೇವಪ್ಪ ಹಾಗೂ ವೈಶಾಲಿ ಅವರು ಬಸವಣ್ಣನವರ ವೈಚಾರಿಕ ಚಿಂತನೆಯ ಬಗ್ಗೆ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್.ಪಾಟೀಲ, ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಗೀತಮಾಲಾ ಎಲಿನೋರ್ ಇದ್ದರು.

ಡಾ. ಸಾರಿಕಾದೇವಿ ಕಾಳಗಿ ಸ್ವಾಗತಿಸಿ, ಡಾ. ಚಿದಾನಂದ ಚಿಕ್ಕಮಠ ನಿರೂಪಿಸಿದರು. ಡಾ.ಪ್ರಭಾವತಿ ಚಿತ್ತಕೋಟಿ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !