ಅಫಜಲಪುರ: ಮಹಾರಾಷ್ಟ್ರದಿಂದ ಭೀಮಾನದಿಗೆ 1.50 ಲಕ್ಷ ಕ್ಯೂಸೆಕ ನೀರು ಬಿಡಲಾಗಿದೆ. ಹೀಗಾಗಿ ಬುಧವಾರ ಮಧ್ಯಾಹ್ನ ಘತ್ತರಗಾ, ದೇವಲ್ ಗಾಣಗಾಪುರದ ಸೇತುವೆಗಳು ಮುಳಗಡೆಯಾಗಿ, ಸಂಚಾರ ಸ್ಥಗಿತವಾಗಿದೆ.

ಉಜನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ಹಾಗೂ ಸೀನಾ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ಹಳ್ಳ, ಬೋರಿಹಳ್ಳಗಳಿಂದ 25 ಸಾವಿರ ಕ್ಯೂಸೆಕ್ ನೀರು ಭೀಮ ನದಿಗೆ ಕಳೆದ ಸೋಮವಾರ ಬಿಟ್ಟಿದ್ದರಿಂದ ಬುಧವಾರ ತಾಲೂಕಿನ ಸೊನ್ನ ಭೀಮಾ ಜಲಾಶಯಕ್ಕೆ ನೀರು ಬಂದು ಸೇರುತ್ತಿದ್ದು. ಅದೇ ಪ್ರಮಾಣದಲ್ಲಿ ಬ್ಯಾರೇಜಿನ ಗೇಟ್ ತೆರೆದು ನದಿಯ ಕೆಳಭಾಗಕ್ಕೆ ಹೆಚ್ಚುವರಿ ನೀರು ಬಿಡಲಾಗುತ್ತಿದೆ.

ಮುಳಗಡೆಯಾಗಿರುವ ಎರಡು ಸೇತುವೆಗಳಲ್ಲಿ ಪೊಲೀಸರ ಕಾವಲು ಇರಿಸಲಾಗಿದೆ. ರೈತರು ತಮ್ಮ ಜಾನುವಾರಗಳನ್ನ ನದಿಯ ದಡಕ್ಕೆ ಬಿಡಬಾರದು. ರೈತರು ತಮ್ಮ ಪಂಪ್ಸೆಟ್ಟುಗಳನ್ನ ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ತಹಶೀಲ್ದಾರ್ ಸಂಜು ಕುಮಾರ್ ದಾಸರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.