ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬೈಕ್‌ ಪಲ್ಟಿಯಾಗಿ ವ್ಯಕ್ತಿ ಸಾವು

Last Updated 20 ಫೆಬ್ರುವರಿ 2021, 7:25 IST
ಅಕ್ಷರ ಗಾತ್ರ

ಮಡಬಾ(ಕಲಬುರ್ಗಿ): ಚಿತ್ತಾಪುರದ ಆಗ್ನಿಶಾಮಕ ಠಾಣೆಯ ಹತ್ತಿರ ರಸ್ತೆಯಲ್ಲಿ ಗುರುವಾರ ರಾತ್ರಿ ಬೈಕ್‌ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಮಡಬಾ ಗ್ರಾಮದ ಚನ್ನಬಸಪ್ಪ ಪಾಟೀಲ (45) ಮೃತಪಟ್ಟವರು. ರಾತ್ರಿ ಗ್ರಾಮಕ್ಕೆ ತೆರಳುತ್ತಿದ್ದಾಗ ಎದುರಿನಲ್ಲಿ ಬರುತ್ತಿದ್ದ ದೊಡ್ಡ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಅಪಘಾತ ಸಂಭವಿಸಿದೆ. ದೊಡ್ಡ ವಾಹನದ ಫೋಕಸ್‌ ಲೈಟಿನ ಬೆಳಕಿನಿಂದ ಕಣ್ಣುಕುಕ್ಕಿದ್ದೇ ಬೈಕ್‌ ಬೀಳಲು ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT