ಕಲಬುರ್ಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಶಶೀಲ್ ಜಿ.ನಮೋಶಿ ಜಯಗಳಿಸಿದರು.

ಪುನರಾಯ್ಕೆ ಬಯಸಿದ್ದ ಕಾಂಗ್ರೆಸ್ನ ಶರಣಪ್ಪ ಮಟ್ಟೂರ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪರಾಭವಗೊಂಡರೂ 3,848 ಮತ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು.

ಚಲಾವಣೆಯಾಗಿದ್ದ 21,437 ಮತಗಳಲ್ಲಿ 1,844 ತಿರಸ್ಕೃತಗೊಂಡವು. 19,593 ಮತಗಳು ಕ್ರಮಬದ್ಧವಾಗಿದ್ದವು. ಗೆಲುವಿಗೆ 9,797 ಮತಗಳ ‘ಕೋಟಾ’ವನ್ನು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್ ನಿಗದಿ ಮಾಡಿದರು.

ನಮೋಶಿ ಆರಂಭದಿಂದ ಮುನ್ನಡೆ ಸಾಧಿಸಿದ್ದರೂ, ಕೋಟಾ ತಲುಪಲಿಲ್ಲ. ಐವರು ಅಭ್ಯರ್ಥಿಗಳಲ್ಲಿ ಅತೀ ಕಡಿಮೆ ಮತ ಪಡೆದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ (59 ಮತ), ಪಕ್ಷೇತರ ಚಂದ್ರಕಾಂತ ಸಿಂಗೆ (93 ಮತ), ಜೆಡಿಎಸ್ನ ತಿಮ್ಮಯ್ಯ ಪುರ್ಲೆ ಅವರನ್ನು ಸ್ಪರ್ಧೆಯಿಂದ ಕೈಬಿಟ್ಟು ಅವರಿಗೆ ಸಲ್ಲಿಕೆಯಾಗಿದ್ದ ಮತಗಳಲ್ಲಿಯ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಸಲಾಯಿತು. ಈ ಸುತ್ತಿನಲ್ಲಿ ನಿಗದಿತ ಕೋಟಾವನ್ನು ಬಿಜೆಪಿ ಅಭ್ಯರ್ಥಿ ತಲುಪಿದ ನಂತರ ಫಲಿತಾಂಶ ಘೋಷಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.