ಬುಧವಾರ, ಸೆಪ್ಟೆಂಬರ್ 29, 2021
19 °C

ಬಿಜೆಪಿ ಆಡಳಿತದಲ್ಲಿ ಹೆಚ್ಚಿದ ಭ್ರಷ್ಟಾಚಾರ: ಡಾ.ಶರಣಪ್ರಕಾಶ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ‘ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ’ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಪಾಡಿಯಾ ಭವನದಲ್ಲಿ ಹಲವು ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗ ಜನ ಬಿಜೆಪಿ ದುರಾಡಳಿತದ ವಿರುದ್ಧ ರೋಸಿ ಹೋಗಿದ್ದು, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ತತ್ವಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಅತ್ಯಂತ ಸಂತಸ ತಂದಿದೆ’ ಎಂದರು.

‘ಏಳು ದಶಕಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಧಾನಿ ಅವರು ಕೇಳುತ್ತಾರೆ. ಆದರೆ, ಒಬ್ಬ ಚಹಾ ಮಾರುತ್ತಿದ್ದ ವ್ಯಕ್ತಿ ಕೂಡ ದೇಶದ ಪ್ರಧಾನಮಂತ್ರಿಯಾಗುವ ವ್ಯವಸ್ಥೆ ನಿರ್ಮಿಸಿದ್ದು ಕಾಂಗ್ರೆಸ್ ಪಕ್ಷ’ ಎಂದರು.

ಸೇಡಂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ಮಾತನಾಡಿದರು.

ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಇಟಕಾಲ್, ವೆಂಕಟರಾಮರೆಡ್ಡಿ ಕಡತಾಲ್, ಹೇಮಾರೆಡ್ಡಿ ಪಾಟೀಲ, ಅಬ್ದುಲ್ ಗಫೂರ, ಸತೀಶರೆಡ್ಡಿ ರಂಜೋಳ, ರಾಹುಲ್, ವಿಶ್ವನಾಥ ಪಾಟೀಲ ಬೊಮ್ಮನಳ್ಳಿ, ಅನಂತಯ್ಯ ಮುಸ್ತಾಜರ್, ಸಂತೋಷ ಕುಲಕರ್ಣಿ ಇದ್ದರು.

ಯುವಕರು ಕಾಂಗ್ರೆಸ್ ಸೇರ್ಪಡೆ: ತೆರೆದ ವಾಹನದಲ್ಲಿ ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಪಕ್ಷದ ಮುಖಂಡರ ಮೆರವಣಿಗೆ ಚೌರಸ್ತಾ, ಕಿರಾಣ ಬಜಾರ್ ಮೂಲಕ, ತಾಪಾಡಿಯಾ ಭವನ ತಲುಪಿತು.

ಮೆರವಣಿಯುದ್ದಕ್ಕೂ ಕಾರ್ಯ ಕರ್ತರು ಸಂಭ್ರಮಿಸಿದರು. ಎರಡು ಜೆಸಿಬಿಗಳ ಮೇಲೆ ನಿಂತು, ದೊಡ್ಡ ಹಾರವನ್ನು ಮಾಜಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರಿಗೆ ಹಾಕಿದರು. 

ಭೀಮಾಶಂಕರ ಕೊಳ್ಳಿ, ಶಿವಕುಮಾರ ಜೀವಣಗಿ, ಅಭಿ‍ಷೇಕ ಬಾಗೋಡಿ, ಜಗದೀಶ ಕಲಶೆಟ್ಟಿ, ಸೇರಿದಂತೆ 100ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು