ಬುಧವಾರ, ಜನವರಿ 29, 2020
28 °C

ಹೊಸಪೇಟೆಯ ಮಾರುತೇಶ್‌ ‘ಸಾಗರ್ ಕ್ಲಾಸಿಕ್ ಟೈಟಲ್‌ ವಿನ್ನರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಡಾ.ಪಂಡಿತ ರಂಗಮಂದಿರದಲ್ಲಿ ಸಾಗರ ಜಿಮ್‌ ಆಯೋಜಿಸಿದ್ದ 16ನೇ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಹಾಟ್ ಬ್ಲಡ್ ಜಿಮ್‌ನ ಬಿ.ಮಾರುತೇಶ್‌ ಮೊದಲ ಸ್ಥಾನ ಪಡೆಯುವ ಮೂಲಕ ‘ಸಾಗರ್ ಕ್ಲಾಸಿಕ್ ಟೈಟಲ್‌ ವಿನ್ನರ್’ ಆಗಿ ಹೊರಹೊಮ್ಮಿದರು.

2ನೇ ಬಹುಮಾನ ‘ಮಿಸ್ಟರ್ ಸಾಗರ್ ಬೆಸ್ಟ್ ಪೋಜರ್’ ಟೈಟಲ್‌ ಮಂಗಳೂರಿನ ಎವಿಲೇಷನ್ ಜಿಮ್‌ನ ಅವಿನಾಶ್‌ಗೆ ಘೋಷಣೆಯಾಯಿತು. 3ನೇ ಬಹುಮಾನ ‘ಮಿಸ್ಟರ್ ಸಾಗರ್ ಮೋಸ್ಟ್ ಮಸ್ಕಲರ್’ ಟೈಟಲ್ ಅನ್ನು ಬೆಂಗಳೂರಿನ ಫಿಟ್ನೆಸ್‌ ಝೋನ್‌ನ ವಿನಾಯಕ ತಮ್ಮದಾಗಿಸಿಕೊಂಡರು.

ಸಾಗರ್ ಜಿಮ್ ಮಾಲೀಕ ಅಬ್ದುಲ್ ಜಬ್ಬಾರ್ ಅವರು ದೇಹದಾರ್ಢ್ಯ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಿದರು. 

ರಾಜ್ಯದ ನಾನಾ ಭಾಗಗಳಿಂದ 16 ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳಲ್ಲದೆ, ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. 

ದೇಹದಾರ್ಢ್ಯ ಪ್ರದರ್ಶನದ ಜತೆಗೆ ನೃತ್ಯ, ನಗೆ ಚಟಾಕಿ ಕಾರ್ಯಕ್ರಮಗಳು ನಡೆದವು. ಪ್ರೇಕ್ಷಕರಿಗೆ ಕಾರ್ಯಕ್ರಮ ಮುಗಿಯುವವರೆಗೂ ಭರಪೂರ ಮನರಂಜನೆ ಸಿಕ್ಕಿತು.

ಪ್ರತಿಕ್ರಿಯಿಸಿ (+)