ಶುಕ್ರವಾರ, ಆಗಸ್ಟ್ 19, 2022
27 °C

ಬಸ್‌ ಸಂಚಾರ ಸಂಪೂರ್ಣ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಕರ್ನಾಟಕ ಸಾರಿಗೆ ಇಲಾಖೆ ನೌಕರರ ರಾಜ್ಯವ್ಯಾಪಿ ಪ್ರತಿಭಟನೆ ಬೆಂಬಲಿಸಿ ಶುಕ್ರವಾರ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಆಳಂದ ಘಟಕದ ನೌಕರರು ಮುಷ್ಕರ ಕೈಗೊಂಡರು. ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿತು.‌

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಮುಷ್ಕರ ಆರಂಭಿಸಿದ ಸಾರಿಗೆ ನೌಕರರು ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಿದ ಕಾರಣ, ಕಲಬುರ್ಗಿ, ಅಫಜಲಪುರ, ಸೊಲ್ಲಾಪುರ, ಉಮರ್ಗಾ, ಬಸವ ಕಲ್ಯಾಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸುವ ಬಸ್‌ಗಳ ಓಡಾಟ ಕಂಡು ಬರಲಿಲ್ಲ. ಇದರಿಂದ ಸಾರ್ವಜನಿಕರು ಹೆಚ್ಚಿನ ತೊಂದರೆ ಅನುಭವಿಸಿದರು. ನೆರೆಯ ಮಹಾರಾಷ್ಟ್ರದ ಬಸ್‌ಗಳು ಮಾತ್ರ ಆಗಾಗ್ಗೆ ಕಲಬುರ್ಗಿ– ಸೊಲ್ಲಾಪುರ, ಉಮರ್ಗಾ ಮಾರ್ಗದಲ್ಲಿ ಸಂಚರಿಸಿದವು.

ಆಳಂದ ಬಸ್‌ ಘಟಕದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ ಚಂದ್ರಶೇಖರ ಹಿರೇಮಠ ಮಾತನಾಡಿದರು. ಸಾರಿಗೆ ನೌಕರರಾದ ಅಂಬಾರಾಯ, ದೌಲಸಾಬ್‌, ಸಾಧೀಕ ಅನ್ಸಾರಿ, ನೂರ್ ಅಹ್ಮದ್, ವಿಜಯಕುಮಾರ ಹೆಬಳಿ, ಬಾಬಾ ಮುಲ್ಲಾ, ಈರಣ್ಣ ಧುತ್ತರಗಾಂವ, ಪ್ರಭು ಕಿಸಣಗಿ, ಹೈದರಾಲಿ ಸೂಂಟನೂರು, ಶ್ರೀಶೈಲ ನಾಗಲೇಗಾಂವ, ಅಶೋಕ ಕೊಡಲ ಹಂಗರಗಾ, ದತ್ತಾ ಚಿಂಚೋಳಿ, ಶಿವಶಂಕರ ಕಡಗಂಚಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.