ಸೋಮವಾರ, ಜೂನ್ 21, 2021
23 °C

ಸಿರಗುಪ್ಪ ಬಳಿ ಕಾರು– ಲಾರಿ ನಡುವೆ ಭೀಕರ ಅಪಘಾತ: ಚಿಂಚೋಳಿಯ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ(ಕಲಬುರ್ಗಿ ಜಿಲ್ಲೆ): ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್ ಕಾರಣ ಸ್ವಗ್ರಾಮಕ್ಕೆ ಬರುವಾಗ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಸುಕಿನ 1.45ರ ಸುಮಾರಿಗೆ ನಡೆದಿದೆ.

ಮೃತರು ಚಿಂಚೋಳಿ ತಾಲ್ಲೂಕಿನ ಚಿಮ್ಮಾಈದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದವರಾಗಿದ್ದಾರೆ.

ಲಾಕ್‌ಡೌನ್ ಜಾರಿಯಿಂದಾಗಿ ಬೆಂಗಳೂರಿನಿಂದ ಕಾರಿನಲ್ಲಿ ಬರುವಾಗ ಲಾರಿ ಗುದ್ದಿದೆ ಆಗ ಬಳ್ಳಾರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ (ತಂದೆ) ಬಸವರಾಜ ಭೀಮರಾವ ಬೆಳ್ಳೂರು(52), ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ (ಮಗ)ಭೀಮರಾವ ಬೆಳ್ಳೂರು (30), ಖಾಸಗಿ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿಇ ಪದವಿಧರ ಸುನೀಲ ಶಿವರಾಜ ಪಾಟೀಲ‌(30), ಕಾರಿನ ಚಾಲಕ ಕೊರಡಂಪಳ್ಳಿಯ ರೇವಣಸಿದ್ದ ಬಸವರಾಜ ಕೊರಡಂಪಳ್ಳಿ(30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ... ಕೋವಿಡ್: ಮಹಾರಾಷ್ಟ್ರದಲ್ಲಿ ಒಂದೇ ದಿನ 895 ಜನ ಸಾವು, 66,358 ಹೊಸ ಪ್ರಕರಣ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು