ಸೇಡಂ: ಬಾಲ್ಯವಿವಾಹ ಮಾಡಿದ್ದಕ್ಕಾಗಿ ಹುಡುಗ ಮತ್ತು ಹುಡುಗಿಯ ಪಾಲಕರ ವಿರುದ್ಧ ಸೇಡಂ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಡಿ.17ರಂದು ಬಾಲ್ಯವಿವಾಹ ನಡೆದಿದೆ ಎಂದು ಅನಾಮಿಕರೊಬ್ಬರು ಮಕ್ಕಳ ಸಹಾಯವಾಣಿ 1098 ಕರೆ ಮಾಡಿದ್ದರು. ಕರೆಯನ್ನಧಾರಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರ ಸೂಚನೆ ಅನ್ವಯ ಸೇಡಂ ತಾಲ್ಲೂಕಿನ ಸಿಡಿಪಿಒ ಅನುರಾಧಾ ಪಾಟೀಲ, ಮಹಾನಂದ ಶಾಬಾದಕರ್, ಆನಂದರಾಜ್, ಬಸವರಾಜ ಟೆಂಗಳಿ, ಮಲ್ಲಯ್ಯ ಗುತ್ತೇದಾರ ಮತ್ತು ಬಾಲ್ಯವಿವಾಹ ನಿಷೇಧಾಧಿಕಾರಿಗಳು ಹಾಗೂ ತಾಲ್ಲೂಕು ವಿಸ್ತಿರ್ಣಾಧಿಕಾರಿ ಅಲ್ಪಸಂಖ್ಯಾತರ ಇಲಾಖೆ ಹಸನ್ ಚಾವೂಸ್ ಅವರು ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ.

ಬಾಲಕಿಯ ಮದುವೆ ಮಾಡಿದ್ದರ ಬಗ್ಗೆ ತಾಯಿಯಿಂದ ಮಾಹಿತಿ ಪಡೆದಿದ್ದಾರೆ. ಮದುವೆ ನಡೆದಿದೆ ಎಂಬ ಖಚಿತ ಮಾಹಿತಿ ಪಡೆದು, ಬಾಲಕ ಮತ್ತು ಬಾಲಕಿಯ ಪತ್ತೆಗೆ ಜಾಲ ಬೀಸಿದ್ದು, ಅವರು ಸಿಗಲಿಲ್ಲವೆಂದು ರಾತ್ರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳು ಸೇಡಂ ಪಟ್ಟಣದ ಇನ್ಫೋಸಿಸ್ ಕಾಲೊನಿಯಲ್ಲಿರುವ ಬಾಲಕಿಯ ಪೋಷಕರು, ತಾಲ್ಲೂಕಿನ ರಂಜೋಳ ಗ್ರಾಮದ ಹುಡುಗನ ಪೋಷಕರ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.