ಸೋಮವಾರ, ನವೆಂಬರ್ 30, 2020
20 °C

ಬೈಕ್ ಡಿಕ್ಕಿ: ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಕಲಭಾವಿ ತಾಂಡಾ ಕ್ರಾಸ್‌ನಲ್ಲಿ ಶನಿವಾರ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವೃದ್ಧ ಸ್ಥಳದಲ್ಲೇ
ಮೃತಪಟ್ಟಿದ್ದಾರೆ.

ಚಿಂಚೋಳಿಯ ನಿವಾಸಿ ರಾಮಚಂದ್ರ ಕಲಭಾವಿ (60) ಮೃತಪಟ್ವರು. ಶನಿವಾರ ಮಧ್ಯಾಹ್ನ ರಸ್ತೆ ಪಕ್ಕದಲ್ಲಿ ನಡೆದುಕೊಂಡ ಹೋಗಬೇಕಾದರೆ ಹಿಂದಿನಿಂದ ವೇಗವಾಗಿ ಬಂದ್‌ ಬೈಕ್‌ ಸವಾರ ಇವರಿಗೆ ನೇರವಾಗಿ ಬೈಕ್‌ ಗುದ್ದಿಸಿದ. ಬಿದ್ದ ರಭಸಕ್ಕೆ ರಾಮಚಂದ್ರ ಅವರು ಸ್ಥಳದಲ್ಲೇ ಜೀವ ಬಿಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಬೈಕ್ ಸವಾರ ಉಮೇಶ ಲಕ್ಷ್ಮಣ ರಾಠೋಡ ಗಾಯಗೊಂಡಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ರಾಜಶೇಖರ ರಾಠೋಡ ಭೇಟಿ ಸ್ಥಳಕ್ಕೆ ಪರಿಶೀಲಿಸಿದರು.

ಮೃತನ ಪುತ್ರ ಲಕ್ಷ್ಮಿಕಾಂತ್ ಕಲಭಾವಿ ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು