ಚಿಂಚೋಳಿ: ತಾಲ್ಲೂಕಿನ ಕೆಲವು ಕಡೆ ರೈತರು ತಮ್ಮ ಹೊಲದಲ್ಲಿರುವ ಕೃಷಿ ತ್ಯಾಜ್ಯ ಹಾಗೂ ಬದುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಆದರೆ, ಇದು ಕಾಡಿಗೆ ವಿಸ್ತರಿಸಿ ಅರಣ್ಯ ಪ್ರದೇಶಕ್ಕೆ ಹಾನಿ ಉಂಟು ಮಾಡುತ್ತಿದ್ದು, ರೈತರು ಎಚ್ಚರಿಕೆ ವಹಿಸಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ ಮನವಿ ಮಾಡಿದ್ದಾರೆ.

ಭೂಂಯಾರ್ ಸುತ್ತಲೂ ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಬೆಂಕಿ ಹೊತ್ತಿ ಕಾಡಿಗೆ ಹಬ್ಬಿದ್ದು, ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡುವಂತಾಗಿದೆ. ಅರಣ್ಯ ನಮ್ಮ ಬದುಕಿಗೆ ಅತ್ಯಂತ ಮುಖ್ಯ ಎಂದಿದ್ದಾರೆ

ಮನುಷ್ಯರಿಗೆ ಅಷ್ಟೆ ಅಲ್ಲದೇ, ವನ್ಯಜೀವಿಗಳಿಗೂ ಕಾಡು ಅತ್ಯಾವಶ್ಯಕ ಕಾಡು ಬೆಂಕಿಗೆ ಆಹುತಿಯಾದರೆ ವನ್ಯಜೀವಿಗಳು, ಪಶು ಪಕ್ಷಿಗಳ ಸಂಕುಲಕ್ಕೆ ಆಪತ್ತು ಎದುರಾಗಲಿದೆ ಹೀಗಾಗಿ ಪರೋಪಕಾರಿಗಳಾದ ರೈತರು ತಮ್ಮ ಹೊಲದಲ್ಲಿ ಬೆಂಕಿ ಹಚ್ಚಿದ್ದರೆ ಅದನ್ನು ನಂದಿಸುವವರೆಗೆ ಹೊಲದಲ್ಲಿಯೇ ಇದ್ದು ಬೆಂಕಿ ನಂದಿದ ನಂತರ ವಾಪಸ್ಸಾಗಬೇಕು. ಈ ರೀತಿ ಎಚ್ಚರಿಕೆ ವಹಿಸಿದರೆ ಕಾಡು ಉಳಿಸಲು ರೈತರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದಂತಾಗುತ್ತದೆ ಎಂದಿದ್ದಾರೆ. ಭೂಂಯಾರ್ ಸುತ್ತಲೂ ಅವರ್ಗಿಕೃತ ಅರಣ್ಯದ 5 ರಿಂದ 10 ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಮ್ಮ ಸಿಬ್ಬಂದಿ ನಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭೂಂಯಾರ್ ಕೆ ಸುತ್ತಲೂ ರೈತರ ಜಮೀನು, ಅರಣ್ಯ ಪ್ರದೇಶ ಹಾಗೂ ಸರ್ಕಾರದ ಪರಂಫೋಕ ಜಮೀನಿನಲ್ಲಿ ಬೆಂಕಿಯಿಂದ ಹೊತ್ತಿದ್ದು ನೆಲವೆಲ್ಲ ಕಪ್ಪಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಲೋಕೇಶ ಶೆಳ್ಳಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.