ಚಿಂಚೋಳಿ: ‘ಕ್ಷೇತ್ರ ವ್ಯಾಪ್ತಿಯ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾದ ಅನುದಾನ ಹಿಂಪಡೆಯಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು’ ಎಂದು ಶಾಸಕ ಡಾ.ಅವಿನಾಶ ಜಾಧವ ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಹ ಪೀಡಿತ ಬೋನಸಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕ್ಷೇತ್ರ ವ್ಯಾಪ್ತಿಯ ನಾಗಾಈದಲಾಯಿ ಕೆರೆ ದುರಸ್ತಿಗೆ ಅನುದಾನ ನೀಡುತ್ತಿಲ್ಲ. ಕೊಳ್ಳೂರು 110 ಕೆವಿ ಉಪ ಕೇಂದ್ರದ ಟೆಂಡರ್ ರದ್ದುಪಡಿಸಲಾಗಿದೆ. ಕಲ್ಲೂರು ರೋಡ ಗ್ರಾಮ, ಚಂದ್ರಂಪಳ್ಳಿ ಉದ್ಯಾನವನಕ್ಕೂ ಅನುದಾನ ನೀಡುತ್ತಿಲ್ಲ. ನಿಮಗೆ ಚಿಂಚೋಳಿ ಬಗ್ಗೆ ಕಾಳಜಿ ಇದ್ದರೆ ಅನುದಾನ ತಂದು ತೋರಿಸಿ ಕೇವಲ ಪ್ರಚಾರಕ್ಕಾಗಿ ಹೇಳಿಕೆ ಕೊಟ್ಟು ಹೋಗುವುದರಿಂದ ಯಾವ ಪ್ರಯೋಜನವಿಲ್ಲ’ ಎಂದರು.

‘ಕುಂಚಾವರಂ ಜಿಲ್ಲಾ ಪಂಚಾಯಿತಿ ಕ್ಷೇತ್ರವೊಂದರಲ್ಲಿ ₹50 ಕೋಟಿಗೂ ಅಧಿಕ ಮೊತ್ತದ ಹಾನಿಯಾಗಿದೆ’ ಎಂದು ತಿಳಿಸಿದರು.

ತಾಲ್ಲೂಕಿನ ಸೋಮಲಿಂಗದಳ್ಳಿ, ಶಾದಿಪುರ, ಚಾಪ್ಲಾನಾಯಕ ತಾಂಡಾ, ಚಂದು ನಾಯಕ, ಭಿಕ್ಕು ನಾಯಕ, ಜಿಲವರ್ಷಾ, ಜವಾಹರನಗರ ಕ್ರಾಸ್, ಮೊಗದಂಪುರ, ಪೋಚಾವರಂ, ಬೋನಸಪುರ ಗ್ರಾಮ ಮತ್ತು ರಸ್ತೆ, ಸೇತುವೆ ಹಾಗೂ ಬೆಳೆ ಹಾಳಾದ ಸ್ಥಳಗಳನ್ನು ಪರಿಶೀಲಿಸಿದರು.

ಅಶೋಕ ಮೊಗದಂಪುರ, ಉಮಾಪತಿ, ಭೀಮಶೆಟ್ಟಿ ಮುರುಡಾ, ಅಶೋಕ ಚವ್ಹಾಣ, ವಿಜಯಕುಮಾರ ರಾಠೋಡ್, ಸಂಜೀವ ಕೊಂಡಮ್, ಎಲ್. ವೆಂಕಟರೆಡ್ಡಿ, ಗೋಪಾಲ ಬ್ಯಾಗೇರಿ, ಅನುಸೂಜಮ್ಮ, ನಾಗಮ್ಮ, ಕೆ.ಎಂ.ಬಾರಿ, ಶಂಕರ ರಾಠೋಡ್, ಅನಿಲ ಕಾಂಟ್ಲಿ, ವೀರೇಶ ಯಂಪಳ್ಳಿ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.