ಬುಧವಾರ, ಮೇ 18, 2022
23 °C

ಚಿಣ್ಣರ ಮೇಳ: ಅರ್ಜಿ ಅಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಲಬುರಗಿ ರಂಗಾಯಣದಿಂದ ʻಚಿಣ್ಣರಮೇಳ-2022ʼ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಏಪ್ರಿಲ್ 16ರಿಂದ ಮೇ 13 ರವರೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ತಿಳಿಸಿದ್ದಾರೆ.

ಏ. 16ಕ್ಕೆ 8 ವರ್ಷ ಪೂರ್ಣ ತುಂಬಿರುವ ಹಾಗೂ 14 ವರ್ಷದೊಳಗಿರುವ ಮಕ್ಕಳು ಮಾತ್ರ ಈ ಶಿಬಿರದಲ್ಲಿ ಭಾಗವಹಿಸಬಹುದು. ಈ ಶಿಬಿರಕ್ಕೆ ಕೇವಲ 150 ಮಕ್ಕಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಅರ್ಜಿ ಶುಲ್ಕ ₹ 50 ಹಾಗೂ ಪ್ರವೇಶ ಶುಲ್ಕ ₹ 1,500 ನಿಗದಿಪಡಿಸಲಾಗಿದೆ. ಕಲಬುರಗಿ ರಂಗಾಯಣ ಕಚೇರಿಯಿಂದ 2022ರ ಏಪ್ರಿಲ್ 4 ರಿಂದ ಅರ್ಜಿ ಪಡೆಯಬಹುದು. ಏ. 13 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ 08472-227735ಗೆ ಸಂಪರ್ಕಿಸಬಹುದು. ಮಕ್ಕಳಿಗೆ ನಾಟಕ ತರಬೇತಿ ನೀಡುತ್ತ ಚಿಣ್ಣರಲ್ಲಿ ರಂಗಸಂಸ್ಕೃತಿಯನ್ನು ಬೆಳೆಸುವುದು, ಜಾನಪದ ಕಲಾಪ್ರಕಾರಗಳ ಪ್ರಾತ್ಯಾಕ್ಷಿಕೆ ಮತ್ತು ತರಬೇತಿ, ಮಕ್ಕಳ ಕರಕುಶಲ ತಯಾರಿಕೆ, ಮಕ್ಕಳಿಂದಲೆ ಸಾಹಿತ್ಯ ರಚನೆ, ಕಥೆ, ಕವನ, ಹನಿಗವನ ಇತ್ಯಾದಿ ಚಟುವಟಿಕೆಗಳೊಂದಿಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಸೃಜನಶೀಲ ಧ್ವನಿಗೆ ಸೂಕ್ತವೇದಿಕೆ ಕಲ್ಪಿಸಿಕೊಡುವುದೇ ಈ ಮೇಳದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.