ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಕ್ರಿಸ್ ಮಸ್ ಸಂಭ್ರಮ

Last Updated 25 ಡಿಸೆಂಬರ್ 2020, 8:19 IST
ಅಕ್ಷರ ಗಾತ್ರ

ಕಲಬುರ್ಗಿ: ಯೇಸು ಕ್ರಿಸ್ತನ ಜನನದ ಪ್ರಯುಕ್ತ ನಗರದ ಸೇಂಟ್ ಮೇರಿ ಚರ್ಚ್, ಹಿಂದುಸ್ತಾನ್ ಕವನೆಂಟ್ ಚರ್ಚ್ ಹಾಗೂ ಮೆಥಡಿಸ್ಟ್ ಚರ್ಚ್ ಗಳಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ‌ ಕ್ಯಾಥೊಲಿಕ್, ಪ್ರೊಟೆಸ್ಟಂಟ್ ‌ಪಂಥಗಳ ಕ್ತೈಸ್ತ ಧರ್ಮೀಯರು ಚರ್ಚುಗಳಿಗೆ ತೆರಳಿ ಸಾಮೂಹಿಕ ‌ಪ್ರಾರ್ಥನೆ ನೆರವೇರಿಸಿದರು.

ಚರ್ಚ್ ಹೊರಭಾಗದಲ್ಲಿ ‌ಕ್ರಿಸ್ತ ಜನಿಸಿದ ಗೋದಲಿ, ಮೇರಿ ಮಾತೆಯ ಚಿತ್ರಗಳನ್ನು ಅಳವಡಿಸಲಾಗಿದೆ.‌ ಕ್ರಿಸ್ ಮಸ್ ಮರಗಳಿಗೆ ಅಲಂಕಾರಿಕ ವಿದ್ಯುತ್ ದೀಪಗಳು ಮೆರುಗು ಹೆಚ್ಚಿಸಿವೆ.

ಕ್ರೈಸ್ತ ಧರ್ಮಗುರುಗಳು ಪವಿತ್ರ ಗ್ರಂಥ ಬೈಬಲ್‌ನಿಂದ ಆಯ್ದ ಅಧ್ಯಾಯಗಳನ್ನು ಓದಿದರು. ನಂತರ ಭಕ್ತರು ಕುಟುಂಬ ಸಮೇತರಾದ‌ ಕ್ರಿಸ್ತನ ಪ್ರತಿಮೆಗೆ ನಮಿಸಿದರು.

ಸೇಂಟ್ ಮೇರಿ ಚರ್ಚ್ ನಲ್ಲಿ ಫಾದರ್ ಸ್ಟ್ಯಾನಿ ಲೋಬೊ, ಹಿಂದುಸ್ತಾನ್ ಕವನೆಂಟ್ ಚರ್ಚ್ ನಲ್ಲಿ ಫಾಸ್ಟರ್ ಸ್ಯಾಮುವೆಲ್ ಬಾಲೇಕರ್ ಬೈಬಲ್ ಪಠಣ ಮಾಡಿದರು.

ಕ್ರೈಸ್ತ ಧರ್ಮೀಯರು ಮನೆಗಳಲ್ಲಿ ‌ತಯಾರಿಸಿದ ಕೇಕ್ ಹಾಗೂ ಇತರ ಸಿಹಿ ತಿನಿಸುಗಳನ್ನು ಬಂಧು ಮಿತ್ರರಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT