ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | 'ನಿಶ್ಚಿತ ಪಿಂಚಣಿ ನೀಡಲು ಒತ್ತಾಯ'

Published 7 ಜುಲೈ 2024, 16:26 IST
Last Updated 7 ಜುಲೈ 2024, 16:26 IST
ಅಕ್ಷರ ಗಾತ್ರ

ಚಿಂಚೋಳಿ: 2006ರ ನಂತರ ಅನುದಾನಕ್ಕೊಳಪಟ್ಟ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ನಿಶ್ಚಿತ ಪಿಂಚಣಿ ನೀಡಬೇಕೆಂದು ಅನುದಾನಿತ ಶಾಲಾ ಕಾಲೇಜುಗಳ ನೌಕರರು ಒತ್ತಾಯಿಸಿದ್ದಾರೆ.

‘ಸರ್ಕಾರ ನಮಗೆ ಯಾವುದೇ ಪಿಂಚಣಿ ಸೌಲಭ್ಯ ಇರುವುದಿಲ್ಲ. ರಾಜ್ಯದಲ್ಲಿರುವ ಅನುದಾನಿತ ನೌಕರರು ಪಿಂಚಣಿ ಇಲ್ಲದೇ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 141 ದಿನಗಳ ಧರಣಿ ಮಾಡಿದರೂ ಪ್ರಯೋಜನವಾಗಿಲ್ಲ. ವರ್ಷವಾದರೂ ನಮಗೆ ನ್ಯಾಯದೊರಕಿಲ್ಲ. ಪ್ರಸ್ತುತ ಸರ್ಕಾರ ಚುನಾವಣೆ ಪೂರ್ವದಲ್ಲಿ ಪಿಂಚಣಿ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದು, ಅದರಂತೆ ನಿಶ್ಚಿತ ಪಿಂಚಣಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಹಶೀಲ್ದಾರ್‌ ಮೂಲಕ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಿದ್ದಣ್ಣ ಬೇನೂರು, ರಾಜಶೇಖರ ಮುಸ್ತಾರಿ, ನಾಗಶೆಟ್ಟಿ ಪಾಟೀಲ, ಬಾಲಾಜಿ ಪಾಟೀಲ, ಶಾಂತವೀರ ಹೀರಾಪುರ, ಧನಸಿಂಗ್ ಜಾಧವ, ರಾಮಶೆಟ್ಟಿ ಮಾಡಬೂಳ, ಪ್ರಭುಲಿಂಗಯ್ಯ ಸ್ವಾಮಿ, ಶಿವಕುಮಾರ ಮ್ಯಾಕಲ್, ನಾಗರೆಡ್ಡಿ, ಅನಂತರೆಡ್ಡಿ ರಾಮರೆಡ್ಡಿ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT