ಜಗನ್ನಾಥ ಡಿ. ಶೇರಿಕಾರ

ಚಿಂಚೋಳಿ: ಕರ್ನಾಟಕ ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಗರಗಪಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯುತ್ ಸಂಪರ್ಕವಿಲ್ಲದೆ ಗಣಕಯಂತ್ರಗಳು ದೂಳು ಹಿಡಿದಿವೆ. ಇದರಿಂದಾಗಿ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಮದ ವಂಚಿರಾಗಿದ್ದಾರೆ.

ಸುಮಾರು 18 ವರ್ಷಗಳಿಂದ ಪ್ರೌಢಶಾಲೆಯಿದೆ. ಐದಾರು ವರ್ಷಗಳ ಹಿಂದೆ ಐಸಿಟಿ ಯೋಜನೆ ಅಡಿಯಲ್ಲಿ ಸುಮಾರು 10 ಗಣಕಯಂತ್ರಗಳು ಶಾಲೆಗೆ ಬಂದಿವೆ. ಗರಗಪಳ್ಳಿ ಫರ್ದಾರ ಮೋತಕಪಳ್ಳಿ ಕ್ರಾಸ್ನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರಡ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಇಲ್ಲ.

ವಿದ್ಯುತ್ ಸಂಪರ್ಕಕ್ಕಾಗಿ ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಕಂಬ ನೆಟ್ಟು ತಂತಿ ಎಳೆದಿದ್ದಾರೆ. ಆದರೆ ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದರೆ ವಿದ್ಯುತ್ ಪರಿವರ್ತಕದ ಅಗತ್ಯವಿದೆ. ವಿದ್ಯುತ್ ಪರಿವರ್ತಕ ನೀಡಬೇಕಾದರೆ ಜೆಸ್ಕಾಂಗೆ ನಿಗದಿತ ಮೊತ್ತದ ಹಣ ಭರಿಸಬೇಕು. ಇಲ್ಲಿ ಗ್ರಾ.ಪಂ. ಈ ಮೊತ್ತ ಭರಿಸಲು ಮುಂದೆ ಬಂದಿಲ್ಲ. ಅನುದಾನದ ಕೊರತೆಯಿಂದಾಗಿ ಶಾಲಾ ಮಕ್ಕಳು ವಿದ್ಯುತ್ ಕೊರತೆಯಿಂದ ಬಸವಳಿಯುವಂತಾಗಿದೆ.

ಗ್ರಾ.ಪಂಗೆ 15ನೇ ಹಣಕಾಸು ಯೋಜನೆ, ಅನಿರ್ಭಂದಿತ ಅನುದಾನ, ಚೆಟ್ಟಿನಾಡ ಸಿಮೆಂಟ್ ಕಂಪನಿ ಆಸ್ತಿ ತೆರಿಗೆ ಹಣ ಬಂದರೂ ಕೂಡ ಶಾಲೆಗೆ ವಿದ್ಯುತ್ ಸಂಪರ್ಕದ ಹಣ ಭರಿಸಲು ಮೀನಮೇಷ ಎಣಿಸಲಾಗುತ್ತಿದೆ. ಈ ನಡುವೆ 3–4 ವರ್ಷಗಳಿಂದ ತಾ.ಪಂ., ಜಿ.ಪಂ ಚುನಾಯಿತ ಸದಸ್ಯ ಮಂಡಳಿಯಿಲ್ಲ. ಹೀಗಾಗಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. 15ನೇ ಹಣಕಾಸು ಅನುದಾನದಲ್ಲಾದರೂ ವಿದ್ಯುತ್ ಸಂಪರ್ಕದ ಹಣ ಭರಿಸಲು ಅಧಿಕಾರಿಗಳು ಮುಂದಾಗಬೇಕಿತ್ತು. ಅಧಿಕಾರಿಗಳಿಗೆ ಹೇಳುವವರು ಇಲ್ಲ ಕೇಳುವವರು ಇಲ್ಲದಂತಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಚೆಟ್ಟಿನಾಡ ಸಿಮೆಂಟ್ ಕಂಪನಿಯ ಸಿಎಸ್ಆರ್(ಕೈಗಾರಿಕೆಗಳ ಸಾಮಾಜಿಕ ಜವಾಬ್ದಾರಿ) ಅನುದಾನದಲ್ಲಾದರೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

‘ನಮ್ಮ ದೊಡ್ಡಪ್ಪನವರ ಶಾಲೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೂ ಅದು ಸಾಧ್ಯವಾಗಿಲ್ಲ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಮಕ್ಕಳ ಬಗೆಗೆ ಕಾಳಜಿ ವಹಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಬೇಕು’ ಎಂದು ಶಿಕ್ಷಣ ಪ್ರೇಮಿ ಕೈಲಾಶ್ ಮೇಕಿನ ಮನವಿ ಮಾಡಿದ್ದಾರೆ.

ಕರ್ನಾಟಕ ತೆಲಂಗಾಣ ಗಡಿ ಶಾಲೆ ಅನಾಥ 2 ತರಗತಿಗಳು 83 ಶಾಲಾ ಮಕ್ಕಳ ದಾಖಲಾತಿ ಐಸಿಟಿ ಯೋಜನೆ ಅಡಿ ಬಂದ 10 ಗಣಕಯಂತ್ರಗಳು

ಗರಗಪಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಸಂಪರ್ಕ ಕೊರತೆ ಇರುವ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ವಿದ್ಯುತ್ ಸಂಪರ್ಕ ಲಭಿಸುವ ವಿಶ್ವಾಸವಿದೆ
ನಂದಕುಮಾರ ನಾಯನೂರು ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.