ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಅಗ್ನಿಪಥ ವಿರೋಧಿಸಿ ಚಿಂಚೋಳಿಯಲ್ಲಿ ಕಾಂಗ್ರೆಸ್ ಧರಣಿ

Last Updated 28 ಜೂನ್ 2022, 5:26 IST
ಅಕ್ಷರ ಗಾತ್ರ

ಚಿಂಚೋಳಿ: ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಆಡಳಿತ ಭವನದ ಎದುರು ಸೋಮವಾರ ಮುಖಂಡ ಸುಭಾಷ ರಾಠೋಡ ನೇತೃತ್ವದಲ್ಲಿ ಧರಣಿ‌ ನಡೆಸಿದರು.

ಭಾರತೀಯ ಸೇನಾ ವ್ಯವಸ್ಥೆಗೆ ತನ್ನದೇ ಆದ ಹಿರಿಮೆಯಿದೆ ಆದರೆ ಕೇಂದ್ರದ ಬಿಜೆಪಿ ಸರ್ಕಾರ ಅಗ್ನಿಪಥ ಹೆಸರಲ್ಲಿ ಸೈನಿಕರನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವುದು ಸಲ್ಲದು. ಜೀವನ ಭದ್ರತೆ ಇಲ್ಲದ ಈ ಯೋಜನೆಯಿಂದ ದೇಶದ ಭದ್ರತೆ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಪ್ರಯುಕ್ತ ತಕ್ಷಣ ಈ ಯೋಜನೆ ಕೇಂದ್ರ ಸರ್ಕಾರ ಕೈಬಿಡಬೇಕೆಂದು ಮುಖಂಡ ಸುಭಾಷ ರಾಠೋಡ ಒತ್ತಾಯಿಸಿದರು.

ಧರಣಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ‌ ಮಾಲಿ, ದೇವೇಂದ್ರಪ್ಪ‌ಹೆಬ್ಬಾಳ, ಅನಿಲಕುಮಾರ ಜಮಾದಾರ,ರವಿರಾಜ ಕೊರವಿ, ಗೋಪಾಲರಾವ ಕಟ್ಟಿಮನಿ ಮತ್ತಿತರರು ಮಾತನಾಡಿದರು. ಮುಖಂಡರಾದ ಅಬ್ದುಲ್ ಬಾಷೀತ್, ಚಿತ್ರಶೇಖರ ಪಾಟೀಲ, ಬಲಭೀಮ ನಾಯಕ, ಮಹಮದ್ ಹಾದಿ, ಗೋವಿಂದ ರಾಠೋಡ, ಶೇಖ ಫರೀದ್, ಮಲ್ಲಿಕಾರ್ಜುನ‌ ಭೂಶೆಟ್ಟಿ, ನಾಗು ಕಟ್ಟಿ, ಜನಾರ್ದನ ಪಾಟೀಲ ಮೊದಲಾದವರು ಇದ್ದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT