ಮಂಗಳವಾರ, ಜೂಲೈ 7, 2020
29 °C

ಅಯೋಧ್ಯೆಯಲ್ಲಿ ಬೌದ್ಧ ವಿಹಾರ ನಿರ್ಮಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್‌: ಅಯೋಧ್ಯೆಯಲ್ಲಿ ಸಿಕ್ಕಿರುವ ಭಗವಾನ್ ಗೌತಮ ಬುದ್ಧರ ಅವಶೇಷಗಳನ್ನು ಸಂರಕ್ಷಿಸಬೇಕು ಮತ್ತು ಅಲ್ಲಿಯೇ ಬೌದ್ಧ ವಿಹಾರ ನಿರ್ಮಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಿಕ್ಕು ಸಂಘ ವತಿಯಿಂದ ತಹಶೀಲ್ದಾರ್‌ ಮುಖಾಂತರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರಿಗೆ ಮಂಗಳವಾರ ಇಲ್ಲಿ ಮನವಿ ಪತ್ರ ಕಳುಹಿಸಲಾಯಿತು.

ಬೀದರ್‌ನ ಅಣದೂರ ಬುದ್ಧ ವಿಹಾರದ ವರಜ್ಯೋತಿ ಭಂತೇಜಿ ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ತಳಪಾಯ ಅಗೆಯಲು ಪ್ರಾರಂಭಿಸುತ್ತಿದ್ದಂತೆ ಅಗಾಧ ಪ್ರಮಾಣದಲ್ಲಿ ಬುದ್ಧನ ಮೂರ್ತಿಗಳು, ದಮ್ಮ ಚಕ್ರದ ಶಿಲೆಗಳು, ಶಾಸನಗಳು ಮತ್ತಿತರ ಬೌದ್ಧ ಅವಶೇಷಗಳು ಅಗೆದಷ್ಟು ಹೊರಬರುತ್ತಲೇ ಇವೆ. ಹಾಗಾಗಿ ಅಯೋಧ್ಯೆಯ ಆ ಭೂಮಿಯನ್ನು ಬುದ್ಧ ಭೂಮಿಯೆಂದು ಘೋಷಿಸಿ ಬುದ್ಧ ವಿಹಾರ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಡಾ.ಮಲ್ಲೇಶಿ ಸಜ್ಜನ್, ಸುರೇಶ ಮೆಂಗನ್, ಭರತ್ ಧನ್ನಾ, ಶರಣು ಸೂಗೂರ್, ಸಿದ್ರಾಮ ಉದಯಕರ್, ಶರಣು ಧನ್ನೇಕರ್, ಶಿವಶಾಲ ಪಟ್ಟಣಕರ್, ಸಂತೋಷ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.