ಸೋಮವಾರ, ಮಾರ್ಚ್ 30, 2020
19 °C

ಕೊರೊನಾ ಲಾಕ್‌ಡೌನ್: ಜನರ ಓಡಾಟ ತಡೆಗೆ ದಂಡ ಹಿಡಿದ ತಹಶೀಲ್ದಾರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕೊರೊನಾ ಸೋಂಕು ಹರಡುವುದು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಘೊಷಿಸಿದ 21 ದಿನ ಇಡಿ ದೇಶವೇ ಲಾಕ್ ಡೌನ್ ಮಾಡಿದರೂ ತಾಲ್ಲೂಕಿನಲ್ಲಿ ಅಲ್ಲಲಿ ಜನರ ಓಡಾಟ ಕಾಣಿಸುತ್ತಿದೆ. ಇದರ ನಿಯಂತ್ರಣಕ್ಕೆ ಸಂಕಲ್ಪ ತೊಟ್ಟಿರುವ ತಹಶೀಲ್ದಾರ್  ಅರುಣಕುಮಾರ ಕುಲಕರ್ಣಿ ಅವರು ಸ್ವತ  ಲಾಠಿ ಕೈಗೆತ್ತಿಕೊಂಡು ಓಡಾಡಿದರು. 

ಮಿರಿಯಾಣ, ಕುಂಚಾವರಂ ಮತ್ತು ಕೊಳ್ಳೂರು ಕ್ರಾಸ್ ಅಂತರ ರಾಜ್ಯ ಗಡಿಯಲ್ಲಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಚೆಕ್ ಪೋಸ್ಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಜನರನ್ನು ಚದುರಿಸಿದರು.‌ 

ಪಿಎಸ್ಐ ರಾಜಶೇಖರ ರಾಠೋಡ, ವಿಶ್ವನಾಥ ಮುದರೆಡ್ಡಿ, ಸಂತೋಷ ರಾಠೋಡ ಮೊದಲಾದವರು ಇದ್ದರು.  

ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ವಿಚಾರಿಸಿ ಪೊಲೀಸರು ದಂಡ ಬೀಸುವ ಮೂಲಕ ಯುಗಾದಿಯ ಬೆಲ್ಲದ ಬದಲಿಗೆ ಬೇವು ಉಣಬಡಿಸುತ್ತಿರುವುದು ಕಾಣಿಸಿತು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು