ಸೋಮವಾರ, ಜೂನ್ 14, 2021
25 °C

ಜಿಲ್ಲಾ ನ್ಯಾಯಾಲಯ ಶೀಲ್‌ಡೌನ್‌ 10ರವರೆಗೆ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ನಾಲ್ವರು ಸಿಬ್ಬಂದಿಗೂ ಕೋವಿಡ್‌ ಅಂಟಿಕೊಂಡ ಕಾರಣ, ನ್ಯಾಯಾಲಯದ ಶೀಲ್‌ಡೌನ್‌ ಅನ್ನು ಆ. 10ರವರೆಗೆ ಮುಂದುವರಿಸಲಾಗಿದೆ.‌

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರೊಬ್ಬರು ಜುಲೈ 31ರಂದು ನಿವೃತ್ತಿ ಹೊಂದಿದರು. ಮರುದಿನವೇ ಅಂದರೆ; ಆ. 1ರಂದು ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಕಾರಣ, ನ್ಯಾಯಾಲಯ ಆವರಣವನ್ನು ಪೂರ್ಣ ಶೀಲ್‌ಡೌನ್‌ ಮಾಡಲಾಗಿತ್ತು. ಅವರ ಬಳಿ ಕೆಲಸ ಮಾಡುತ್ತಿದ್ದ ಮತ್ತೆ ನಾಲ್ವರು ಸಿಬ್ಬಂದಿಗೂ ಪಾಸಿಟಿವ್ ಇರುವುದು ಗುರುವಾರ ದೃಢಪಟ್ಟಿದೆ.

ಹಾಗಾಗಿ, ಆ.7ರಿಂದ 10ರವರೆಗೆ ಕೂಡ ಯಾವುದೇ ಕಲಾಪಗಳು ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು