ಕಲಬುರ್ಗಿ: ಜಿಲ್ಲೆಯಲ್ಲಿ ಸೋಮವಾರ ನಾಲ್ಕು ತಿಂಗಳ ಹಸುಗೂಸು ಸೇರಿ ಮತ್ತೆ 24 ಮಂದಿಗೆ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಮುನ್ನೂರರ ಗಡಿ (305) ದಾಟಿದೆ. ಬೆಂಗಳೂರನ್ನು ಹೊರತುಪಡಿಸಿದರೆ ತ್ರಿಶತಕ ಬಾರಿಸಿದ ಮೊದಲ ಜಿಲ್ಲೆ ಎಂಬ ಅಪಕೀರ್ತಿ ಕೂಡ ಕಲಬುರ್ಗಿಗೆ ಬಂದಿದೆ.

ಹೊಸದಾಗಿ ಸೋಂಕಿತರಾದವರೆಲ್ಲ ಮಹಾರಾಷ್ಟ್ರದ ವಿವಿಧ ನಗರಗಳಿಂದ ಮರಳಿದವರು. ಈಚೆಗಷ್ಟೇ ಮನೆ ಸೇರಿದ್ದ ಅವರಲ್ಲಿ ವೈರಾಣು ಕಂಡುಬಂದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದೆ. ಇವರಲ್ಲಿ ಎಂಟು ಮಕ್ಕಳೂ ಸೇರಿದ್ದಾರೆ. 25 ವರ್ಷದ ಯುವಕ ಮಾತ್ರ ಕಲಬುರ್ಗಿ ನಗರದವರು.

ತಾಲ್ಲೂಕು ವಾರು ಸೋಂಕಿತರು: ಅಫಜಲಪುರ ತಾಲ್ಲೂಕಿನರೇವೂರ ಗ್ರಾಮದ 25 ವರ್ಷದ ಯುವಕ, 4 ವರ್ಷದ ಗಂಡು ಮಗು, ಆಳಂದ ತಾಲ್ಲೂಕಿನ ಹಿರೊಳ್ಳಿ ತಾಂಡಾದ 22 ವರ್ಷದ ಮಹಿಳೆ, 3 ವರ್ಷ ಬಾಲಕಿ, ಸಲಗರ ಗ್ರಾಮದ 7 ವರ್ಷದ ಬಾಲಕ, 8 ವರ್ಷದ ಬಾಲಕಿ, 12 ವರ್ಷದ ಬಾಲಕಿ, 15 ವರ್ಷದ ಇಬ್ಬರು ಬಾಲಕಿಯರು, 35 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ, ನರೋಣಾದ 65 ವರ್ಷದ ವೃದ್ಧ, 34 ವರ್ಷದ ಮಹಿಳೆ.

ಚಿತ್ತಾಪುರ ತಾಲ್ಲೂಕಿನ 16 ವರ್ಷದ ಬಾಲಕ, 35 ವರ್ಷದ ಪುರುಷ, 20 ವರ್ಷದ ಯುವಕ, 32 ವರ್ಷದ ಪುರುಷ, 30 ವರ್ಷದ ಪುರುಷ.

ಚಿಂಚೋಳಿ ತಾಲ್ಲೂಕಿನ ಚಂದನಕೇರಾದ 26 ವರ್ಷದ ಪುರುಷ, 20 ವರ್ಷದ ಇಬ್ಬರು ಯುವಕರು ಹಾಗೂ 19 ವರ್ಷದ ಯುವಕ.

ಸೇಡಂ ತಾಲ್ಲೂಕಿನ 54 ವರ್ಷದ ಪುರುಷ ಮತ್ತು 44 ವರ್ಷದ ಪುರುಷ, ನಾಡೇಪಲ್ಲಿ ಗ್ರಾಮದ 45 ವರ್ಷದ ಮಹಿಳೆ, ಕುರಕುಂಟಾ ಗ್ರಾಮದ 18 ವರ್ಷದ ಯುವಕ, ಕಡಚರ್ಲಾ ಗ್ರಾಮದ 1 ವರ್ಷ ಮತ್ತು 2 ವರ್ಷದ ಮಕ್ಕಳು ಮತ್ತು 14 ವರ್ಷದ ಬಾಲಕನಲ್ಲಿ ಕಾಣಿಸಿಕೊಂಡಿದೆ. ಮೋತಕಪಲ್ಲಿ ಗ್ರಾಮದ 27 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆ, ಇಟಕಾಲ್ ಗ್ರಾಮದ 22 ವರ್ಷದ ಪುರುಷ ಮತ್ತು 16 ವರ್ಷದ ಯುವತಿ, ಬುರಗಪಲ್ಲಿ ಗ್ರಾಮದ 6 ವರ್ಷದ ಬಾಲಕ ಮತ್ತು 30 ವರ್ಷದ ಪುರುಷನಲ್ಲಿ ಕಾಣಿಸಿಕೊಂಡಿದೆ.

ಕಾಳಗಿ ಪಟ್ಟಣದ 45 ವರ್ಷದ ವ್ಯಕ್ತಿ, ಮಳಗಾ ಕೆ. ಗ್ರಾಮದ 20 ವರ್ಷದ ಯುವಕ, ಕಲ್ಲಹಿಪ್ಪರಗಾ ಗ್ರಾಮದ 30 ವರ್ಷದ ವ್ಯಕ್ತಿ, ವಟವಟಿ ಗ್ರಾಮದ 30 ವರ್ಷದ ವ್ಯಕ್ತಿ ಹಾಗೂ ಮುಕರಂಬಾ ಗ್ರಾಮದ 22 ವರ್ಷದ ಯುವಕ.

ಆಳಂದದ ಕಮಲಾನಗರದಲ್ಲಿ ಒಂದೇ ಕುಟುಂಬದ 6 ಜನರು, ನರೋಣಾ 2, ಜೀರಹಳ್ಳಿ ತಾಂಡಾದಲ್ಲಿ 2, ಕಿಣ್ಣಿಸುಲ್ತಾನ 1.

ಒಟ್ಟಾರೆ ಜಿಲ್ಲೆಯ 305 ಪ್ರಕರಣಗಳಲ್ಲಿ ಏಳು ಮಂದಿ ಮೃತಪಟ್ಟಿದ್ದು, 128 ಜನ ಗುಣಮುಖರಾಗಿದ್ದಾರೆ. ಇನ್ನೂ 170 ಜನ ಚಿಕಿತ್ಸೆಪಡೆಯುತ್ತಿದ್ದಾರೆ.

‘ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹ’

ಬೇರೆಡೆಯಿಂದ ಜಿಲ್ಲೆಗೆ ಬಂದು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಿದ ಹಲವರ ಕೊರೊನಾ ತಪಾಸಣೆಗಾಗಿ ಗಂಟಲು ದ್ರವ ಸಂಗ್ರಹಿಸಬೇಕಿದೆ. ಅದಕ್ಕಾಗಿ ವೈದ್ಯಕೀಯ ತಂಡಗಳು ಮನೆಗಳಿಗೆ ಭೇಟಿ ನೀಡಿ ಮಾದರಿ ಸಂಗ್ರಹ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಈ ಕಾರ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.