ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೊರೊನಾದಿಂದ 7 ಮಂದಿ ಸಾವು, 479 ಪಾಸಿಟಿವ್‌

ಒಂದೇ ದಿನ 538 ಮಂದಿ ಗುಣಮುಖ; ಸೋಂಕಿತರಿಗಿಂದ ಏರಿಕೆಯಾದ ಗುಣಮುಖರ ಸಂಖ್ಯೆ
Last Updated 3 ಮೇ 2021, 3:59 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ‌ 7 ಜನ ಮೃತಪಟ್ಟಿದ್ದಾರೆ ಎಂದು ಭಾನುವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ ಒಟ್ಟು 479ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪುರ ತಾಲ್ಲೂಕಿನ‌ ಹುಣಸಿಹಡಗಿಲ್ ಗ್ರಾಮದ 53 ವರ್ಷದ ಪುರುಷ ಏ. 19ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ1ಕ್ಕೆ ನಿಧನ ಹೊಂದಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ‌ ಬಳಲುತ್ತಿದ್ದ ಕಲಬುರ್ಗಿಯ ಬಾಪು ನಗರದ 77 ವರ್ಷದ ವೃದ್ಧ ಏ.25ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೇ.1ಕ್ಕೆ ನಿಧನ ಹೊಂದಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಬಡೇಪುರ ಕಾಲೊನಿಯ 50 ವರ್ಷದ ಮಹಿಳೆ ಏ.24 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೇ 2ರಂದು ಮೃತಪಟ್ಟಿದ್ದಾರೆ.

‌ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಕಲಬುರ್ಗಿಯ ಭರತ‌ ನಗರದ 28 ವರ್ಷದ ಯುವಕ ಏ.30ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಅಂದೇ ನಿಧನ ಹೊಂದಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಶಹಾಬಾದ್‌ ಪಟ್ಟಣದ 70 ವರ್ಷದ ವೃದ್ಧ ಏ.28 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ಏ.30ರಂದು ಮೃತಪಟ್ಟಿದ್ದಾರೆ.

ಉಸಿರಾಟದ ತೊಂದರೆ ಹಿನ್ನೆಲೆಯಿಂದ ಕಲಬುರ್ಗಿ ದೇವಾ ನಗರದ 48 ವರ್ಷದ ಮಹಿಳೆ ಏ.27 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಮೇ.1ಕ್ಕೆ ನಿಧನ ಹೊಂದಿದ್ದಾರೆ. ಅದೇ ರೀತಿ, ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರ್ಗಿಯ ಐವಾನ್ ಇ ಶಾಹಿ ಪ್ರದೇಶದ 78 ವರ್ಷದ ವೃದ್ಧ ಏ.25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಏ.30ರಂದು ಕೊನೆಯುಸಿರೆಳೆದಿದ್ದಾರೆ.

427 ಮಂದಿಗೆ ಪಾಸಿಟಿವ್‌: ಜಿಲ್ಲೆಯ 427 ಮಂದಿಗೆ ಕೊರೊನಾ ಸೋಂಕು ಅಂಟಿಕೊಂಡಿದ್ದು, ಭಾನುವಾರ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 41046ಕ್ಕೆ ಏರಿಕೆಯಾಗಿದೆ. ಅದೇ ರೀತಿ ಭಾನುವಾರ ಒಂದೇ ದಿನ 538 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್‌ ತಿಳಿಸಿದೆ.

ವಾಹನ ಸಂಚಾರ ವಿರಳ: ನಗರದಲ್ಲಿ ಕೊರನಾ ಕರ್ಫ್ಯೂ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದರಿಂದ ಭಾನುವಾರ ವಾಹನಗಳ ಓಡಾಟ ಮತ್ತಷ್ಟು ವಿರಳವಾಗಿತ್ತು. ಭಾನುವಾರದ ರಜಾ ದಿನವನ್ನು ಜನರು ಮನೆಯಲ್ಲೇ ಉಳಿದು ಕಳೆದರು.‌

ನಗರದ ಪ್ರಮುಖ ವೃತ್ತ, ಚೌಕ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್‌ ಕಾವಲು ಮುಂದುವರಿದಿತ್ತು. ಆದರೆ, ಇಲ್ಲಿನ ಸೇಡಂ ರಸ್ತೆ ಹಾಗೂ ನ್ಯೂ ಜೇವರ್ಗಿ ರಸ್ತೆಯಲ್ಲಿ ಮಾತ್ರ ವಾಹನಗಳ ಸಂಚಾರ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT