ಕಮಲಾಪುರ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿಯನ್ನು ಮಂಗಳವಾರ ಬಂಧಿಸಿದ ಕಮಲಾಪುರ ಪೊಲೀಸರು ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದಾರೆ.
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮದ ನಿವಾಸಿ ನಬಿ ಮಹೆಬೂಬ್ ಜಮಾದಾರ ಬಂಧಿತ ಆರೋಪಿ.
ಕಳೆದ ಸೆ.6ರಂದು ಅಪ್ರಾಪ್ತೆ ಕಾಲೇಜಿಗೆ ತೆರಳಿದ್ದು, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ನಾಲ್ಕು ದಿನ ಹುಡುಕಿದ ಪಾಲಕರು, ಸೆ.10 ರಂದು ಆರೋಪಿ ನಬಿ ಅಪಹರಿಸಿರುವ ಸಂಶಯ ವ್ಯಕ್ತಪಡಿಸಿ ಕಮಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಮಂಗಳವಾರ ಸೊಲ್ಲಾಪುರ ರೈಲು ನಿಲ್ದಾಣದಲ್ಲಿ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಸೊಲ್ಲಾಪುರದಲ್ಲೇ ಬಿಟ್ಟು ಆರೋಪಿ ನಬಿ ತನ್ನ ಸ್ವಗ್ರಾಮಕ್ಕೆ ಬಂದಿದ್ದನು. ಆರೋಪಿಯನ್ನು ಹಳ್ಳಿಖೇಡದಲ್ಲಿ ಬಂಧಿಸಿ ಪೋಕ್ಸೊ ಅಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.