ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಮಳೆಗೆ ಚೇತರಿಸಿಕೊಂಡ ಬೆಳೆ

Published 20 ಆಗಸ್ಟ್ 2024, 4:57 IST
Last Updated 20 ಆಗಸ್ಟ್ 2024, 4:57 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಮಳೆ ಇಲ್ಲದೆ ಕಮರುತ್ತಿದ್ದ ಮುಂಗಾರು ಹಂಗಾಮಿನ ಲಘು ವಾಣಿಜ್ಯ ಬೆಳೆಗಳಾದ ಉದ್ದು, ಹೆಸರು, ಸೂರ್ಯಕಾಂತಿ , ಅಲಸಂದಿ, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ಶುಕ್ರವಾರ ಸುರಿದ ಮಳೆಯಿಂದ ಅನುಕೂಲವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ಜೂನ್ ತಿಂಗಳಲ್ಲಿ ಹದವಾದ ಮಳೆಯಾಗಿದ್ದರಿಂದ ರೈತರು ಹುಮ್ಮಸ್ಸಿನಿಂದ ಸಾಲ ಸೋಲ ಮಾಡಿ ಮುಂಗಾರು ಬಿತ್ತನೆ ಮಾಡಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಮಳೆ ಕೊರತೆಯಾಗಿತ್ತು. ಆದರೆ ಶುಕ್ರವಾರ ಸುರಿದ ಧಾರಾಕಾರ ಮಳೆ ಮುಂಗಾರು ಹಂಗಾಮಿನ ಬೆಳೆಗಳಿಗೆ ಟಾನಿಕ್ ನೀಡಿದಂತಾಗಿದೆ. ಸದ್ ಬೆಳೆಗಳು ಹೂವಾಡುವ ಹಂತದ‌ಲ್ಲಿದ್ದು, ಒಂದು ವಾರ ಮಳೆ ಬರೆದಿದ್ದರೆ ಶೇ 60ರಷ್ಟು ಇಳುವರಿ ಕುಂಠಿತವಾಗುತ್ತಿತ್ತು ಎಂದು ರೈತರಾದ ಲಕ್ಷ್ಮಣ್ ಕಟ್ಟಿಮನಿ ಹಾಗೂ ಜಕ್ಕಪ್ಪ ಪೂಜಾರಿ ಹೇಳುತ್ತಾರೆ.

ಮುಂಗಾರು ಮಳೆ ಬೆಳೆ ಪರಿಸ್ಥಿತಿ ಕುರಿತು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಿಗಿಮನಿ ಮಾಹಿತಿ ನೀಡಿ, ‘ಮುಂಗಾರು ಹಂಗಾಮಿನ ಬೆಳೆಗಳಿಗೆ ಮಳೆ ಅವಶ್ಯಕತೆಯಿತ್ತು. ತಿಂಗಳ ಹಿಂದೆಯೇ ಮಳೆ ಬಂದಿದ್ದರೆ ಇನ್ನಷ್ಟು ಅನುಕೂಲ ಆಗುತ್ತಿತ್ತು. ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಲಘು ಪೋಷಕಾಂಶ ಮತ್ತು ಹತ್ತಿಬೆಳೆಯ ಕೀಟನಾಶಕಗಳು ಲಭ್ಯವಿದ್ದು, ರೈತರು ಆಧಾರ್ ಕಾರ್ಡ್ ನಮೂದಿಸಿ ಸೌಲಭ್ಯ ಪಡೆಯಬೇಕು’ ಎಂದು ತಿಳಿಸಿದರು.

ತಾಲೂಕಿನಲ್ಲಿ ಮಳೆಗಾಲ ಆರಂಭವಾಗಿ ಮೂರು ತಿಂಗಳ ಕಳೆಯುತ್ತಾ ಬಂದರೂ ಇನ್ನೂ ಪರಿಪೂರ್ಣವಾದ ಮಳೆಯಾಗಿಲ್ಲ. ಹಳ್ಳಕೊಳ್ಳಗಳಿಗೆ ನೀರು ಬಂದಿಲ್ಲ. ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗಿಲ್ಲ. ಹೀಗಾಗಿ ನೀರಾವರಿ ಬೆಳೆಗಳಿಗೆ ಅನಾನುಕೂಲವಾಗುತ್ತಿದೆ. ಪ್ರಸ್ತುತ ವರ್ಷ ಇನ್ನೂ ಸಂಪೂರ್ಣ ಮಳೆ ಆಗುತ್ತಿಲ್ಲ. ಕಬ್ಬು, ಬಾಳೆ, ಮೆಣಸಿನಕಾಯಿ ನಾಟಿ ಮಾಡಲು ಭಯವಾಗುತ್ತಿದೆ’ ಎಂದು ರೈತ ಮುಖಂಡರಾದ ಸಂತೋಷ್ ಗಂಜಿ, ಚಂದ್ರಶೇಖರ್ ಕರಜಗಿ ಹಾಗೂ ಚಂದರಾಮ ಬಳಗೊಂಡೆ ಹೇಳಿದರು.

ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿದಿರುವ ಮಳೆ ಮುಂಗಾರು ಬೆಳೆಗಳಿಗೆ ಅನುಕೂಲವಾಗಿದೆ
ಭೀಮರಾವ್ ಗೌರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಗೌರ(ಬಿ)
ಮುಂಗಾರು ಮಳೆ ಪ್ರಸ್ತುತ ವರ್ಷ ಅನುಕೂಲವಾಗಿದ್ದರಿಂದ ನಮಗೆ ವಾಣಿಜ್ಯ ಬೆಳೆಗಳು ಕೈಗೆ ಬರುವ ಭರವಸೆ ಮೂಡಿದೆ
ಗುರು ಚಾಂದಕೋಟೆ ಪ್ರಾಂತ ರೈತ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT