ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಿಂದ ಹೆಚ್ಚು ಲಾಭ: ಡಾ.ಮುರುಘರಾಜೇಂದ್ರ ಸ್ವಾಮೀಜಿ

Last Updated 5 ನವೆಂಬರ್ 2020, 2:56 IST
ಅಕ್ಷರ ಗಾತ್ರ

ಆಳಂದ: ರೈತರು ಕೃಷಿ ಜೊತೆಗೆ ಹೈನುಗಾರಿಕೆ ಕೈಗೊಂಡರೆ ಆರ್ಥಿಕವಾಗಿ ಹೆಚ್ಚು ಲಾಭ ಹೊಂದಲು ಸಾಧ್ಯವಿದೆ ಎಂದು ಜಿಡಗಾ–ಮುಗಳಕೋಡ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಜಿಡಗಾ ಗ್ರಾಮದಲ್ಲಿ ಸೋಮವಾರ ಜಮಗಾ(ಜೆ) ಹಾಲು ಉತ್ಪಾದಕರ ಸಂಘ ಹಾಗೂ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ ‘ವೈಜ್ಞಾನಿಕ ಹೈನುಗಾರಿಕೆ ಹಾಗೂ ಎರೆಹುಳು ರಸಗೊಬ್ಬರ ತಯಾರಿಕೆ ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತನು ಈ ದೇಶದ ಬೆನ್ನೆಲಬು, ಆದರೆ ರೈತರು ನಿರಂತರ ಸಂಕಷ್ಟದಲ್ಲಿ ಇದ್ದಾರೆ. ಮಿಶ್ರ ಬೇಸಾಯ ಪದ್ಧತಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಿದರೆ ಮಾತ್ರ ನಮ್ಮ ಕೃಷಿ ಪದ್ಧತಿ ಜೀವಂತ ಉಳಿಯಲಿದೆ ಎಂದರು.

ಕೆಎಂಎಫ್‌ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿ, ‘ವೈಜ್ಞಾನಿಕ ಜ್ಞಾನವು ಕೃಷಿ ಕ್ಷೇತ್ರದಲ್ಲಿಯೂ ಅಗತ್ಯವಾಗಿದೆ. ಸಂಪ್ರಾದಾಯಿಕ ಬೆಳೆ ಪದ್ಧತಿ ಕೈಬಿಟ್ಟು ನಮಗೆ ಲಾಭವಾಗುವ ಮಾರ್ಗವನ್ನು ರೈತರು ಅನುಸರಿಸಬೇಕು. ಕೆಎಂಎಫ್‌ ಹೈನುಗಾರಿಕೆಗಾಗಿ ನೆರವು ನೀಡಲಿದೆ ಎಂದರು.

ಕೃಷಿ ತಜ್ಞ ರಾಜು ತೆಗ್ಗಳ್ಳಿ, ಪಶು ವೈದ್ಯಾಧಿಕಾರಿ ಯಲ್ಲಪ್ಪ ಇಂಗಳೆ, ಡಾ.ಮಂಜುನಾಥ ಅವರು ಹೈನುಗಾರಿಕೆ ಹಾಗೂ ಎರೆಹುಳು ತಯಾರಿಕೆ ಕುರಿತು ತರಬೇತಿ ನೀಡಿದರು. ಕೆಎಂಎಫ್ ನಿರ್ದೇಶಕರಾದ ಚಂದ್ರಕಾಂತ ಭೂಸನೂರು, ಈರಣ್ಣಾ ಝಳಕಿ, ತಾಲ್ಲೂಕು ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ಸಂಜಯ ರೆಡ್ಡಿ, ಶಶಿಕಾಂತ ಪಾಟೀಲ, ಗುರುಲಿಂಗಪ್ಪ ಸಕ್ಕರಗಿ, ಶ್ರೀಶೈಲ ಸ್ವಾಮಿ, ಮಲ್ಲಿನಾಥ ಪಾಟೀಲ ಇದ್ದರು. ರಾಮಣ್ಣಾ ಸುತಾರ ನಿರೂಪಿಸಿದರು. ರೇವಣಸಿದ್ದಪ್ಪ ಅಪಚಂದೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT