ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನಾ ಚತುರ ಬಸವಣ್ಣ’

Last Updated 11 ಡಿಸೆಂಬರ್ 2018, 12:56 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಮಾಜದ ಎಲ್ಲಾ ವರ್ಗಗಳ ಜನರನ್ನು ಸಂಘಟಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಬಸವಣ್ಣನವರು ಮಾತ್ರ’ ಎಂದು ಗೋದುತಾಯಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಹೇಳಿದರು.

ನಗರದ ಬಸವ ಸಮಿತಿ ಅಕ್ಕನ ಬಳಗದಲ್ಲಿ ಲಿಂ. ಗುರುಪಾದಪ್ಪ ಶಿವಲಿಂಗಪ್ಪ ಘಂಟಿ ಸ್ಮರಣಾರ್ಥ ಈಚೆಗೆ ಹಮ್ಮಿಕೊಂಡಿದ್ದ 574ನೇ ದತ್ತಿ ಕಾರ್ಯಕ್ರಮದಲ್ಲಿ ‘ಶರಣರ ವೈಚಾರಿಕ ಚಿಂತನೆಗಳು’ ಕುರಿತು ಅವರು ಮಾತನಾಡಿದರು.

‘ಸಂಘಟನೆ ಮೂಲಕ ಸಾಮಾಜಿಕ– ಧಾರ್ಮಿಕ ಪರಿವರ್ತನೆ ಮಾಡಿದ ವಿಶ್ವದ ಮೊಟ್ಟಮೊದಲ ದಾರ್ಶನಿಕ ಮಹಾಪುರುಷ ಬಸವಣ್ಣ. ಸಂಘಟನೆ ಮಾಡುವುದಕ್ಕೆ ಬಸವಣ್ಣನವರಿಗೆ ಸಾಧ್ಯವಾದಷ್ಟು ವಿಶ್ವದ ಇತಿಹಾಸದಲ್ಲಿ ಯಾರಿಗೂ ಸಾಧ್ಯವಾಗಿಲ್ಲ. 1.96 ಲಕ್ಷ ಜಂಗಮರು, 770 ಅಮರ ಗಣಂಗಳು, ಇವರನ್ನು ಹೊರತು ಪಡಿಸಿ ಅನೇಕ ಕಾಯಕ ಜೀವಿಗಳನ್ನೊಳಗೊಂಡಂತೆ ಎಲ್ಲರನ್ನೂ ಅನುಭವ ಮಂಟಪ ವೇದಿಕೆಯ ಮುಖಾಂತರ ವಿಶ್ವಕ್ಕೆ ಪರಿಚಯಿಸಿದ ಅಪರೂಪದ ವ್ಯಕ್ತಿ ಬಸವಣ್ಣ’ ಎಂದು ಬಣ್ಣಿಸಿದರು.

‘ಅನುಭವ ಮಂಟಪದಲ್ಲಿನ ಎಲ್ಲಾ ಶರಣರು ವೈಚಾರಿಕ ನೆಲೆಗಟ್ಟಿನ ಮೇಲೆ ವಚನಗಳನ್ನು ರಚಿಸಿದರು. ಕನ್ನಡ ಭಾಷೆಗೆ ವಿಶೇಷವಾದ ಶಕ್ತಿ, ಹೊಳಪು, ಸತ್ವವನ್ನು ತುಂಬಿದರು. ಶರಣರ ನಡೆ ವೈಚಾರಿಕ, ನುಡಿ ವೈಚಾರಿಕ, ಸಾಹಿತ್ಯವೂ ವೈಚಾರಿಕತೆಯಿಂದ ಕೂಡಿದ್ದಾಗಿತ್ತು’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲರಾದ ಪ್ರೊ.ನಿಂಗಮ್ಮ ಪತಂಗೆ ಮಾತನಾಡಿ, ‘ಶರಣರು ನಡೆ– ನುಡಿ ಒಂದಾದ ಪರಿಶುದ್ಧ ಜೀವಿಗಳಾಗಿದ್ದರು. ಇತರರೂ ಅನುಕರಿಸಬಹುದಾದಂತಹ ಆದರ್ಶ ಬದುಕನ್ನು ಕಟ್ಟಿಕೊಂಡವರು’ ಎಂದರು.

ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ದತ್ತಿ ದಾಸೋಹಿ ಭುವನೇಶ್ವರಿ ಘಂಟಿ, ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯ ಇದ್ದರು.

ಡಾ. ಶಿವಲೀಲಾ ಚಟ್ನಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT