ಬುಧವಾರ, ಆಗಸ್ಟ್ 10, 2022
21 °C
ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ ಅಭಿಮತ;

ದಿಗ್ಗಾಂವ: ₹ 91.50 ಲಕ್ಷ ಮೊತ್ತದ ಕಾಮಗಾರಿಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಜನರು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮಾಡುವ ರಾಜಕಾರಣ ನಂಬಬಾರದು. ಸರ್ವಜನರಿಗೆ ಅನುಕೂಲವಾಗುವ ಅಭಿವೃದ್ಧಿ ಕೆಲಸಗಳನ್ನು ನೋಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ
ಹೇಳಿದರು.

ತಾಲ್ಲೂಕಿನ ದಿಗ್ಗಾಂವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಯಾಗಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ವಿವಿಧ ತಾಂಡಾಗಳಲ್ಲಿ ತಾಂಡಾ ಅಭಿವೃದ್ಧಿ ನಿಗಮ, ಲೋಕೋಪಯೋಗಿ, ಪಂಚಾಯಿತಿ ರಾಜ್ ಇಲಾಖೆಯಡಿ ₹91.50 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರು ಚುನಾವಣೆ ಸಮಯದಲ್ಲಿ ಜನರಿಗೆ ಕೊಟ್ಟಿರುವ ಭರವಸೆಗೆ ತಕ್ಕಂತೆ ಎಲ್ಲಾ ತಾಂಡಾಗಳಿಗೆ ಹೆಚ್ಚಿನ ಅನುದಾನ ನೀಡಿ ಸಮಗ್ರ ಅಭಿವೃದ್ಧಿ ಕೈಗೊಂಡಿದ್ದಾರೆ. ಅವರ ಕೆಲಸ ನೋಡಿ ಜನ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಮಾತನಾಡಿ, ಚುನಾವಣೆಯಲ್ಲಿ ಪ್ರಿಯಾಂಕ್ ಅವರಿಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅತೀ ಕಡಿಮೆ ಮತ ಬಂದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅಂತಹ ತಾಂಡಾಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ತಾರತಮ್ಯದ, ಪಕ್ಷಪಾತದ ರಾಜಕಾರಣಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದರು.

ಬಾಮ್ಲಾ ನಾಯಕ ತಾಂಡಾದಲ್ಲಿ ₹11.50 ಲಕ್ಷದ ಸೇವಾಲಾಲ್ ಭವನ, ಬೆಳಗೇರಾ ಮುಂಗಿತಾಂಡಾ ಮತ್ತು ಸಣ್ಣ ತಾಂಡಾ ಸರ್ಕಾರಿ ಶಾಲೆಗೆ ತಲಾ ₹24 ಲಕ್ಷ ಒಟ್ಟು ₹ 48 ಲಕ್ಷದಲ್ಲಿ 4 ಕೋಣೆ, ಫತ್ತುನಾಯಕ ತಾಂಡಾ ಸರ್ಕಾರಿ ಶಾಲೆಗೆ ₹12 ಲಕ್ಷದಲ್ಲಿ ಒಂದು ಕೋಣೆ, ಸಮಾಜ ಕಲ್ಯಾಣ ಇಲಾಖೆಯ ₹ 20 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹರಿನಾಥ ಚವಾಣ್, ಹಣಮಂತ ಪೂಜಾರಿ, ಮಲ್ಲಣಗೌಡ ಯಾಗಾಪುರ, ಭೀಮರಾಯ ರಾಂಪುರಹಳ್ಳಿ, ಕಾಳು ಚವಾಣ್, ಡೋಂಗ್ರು ಚವಾಣ್, ಭರಮರೆಡ್ಡಿ ಹಂದರಕಿ, ಶರಣಪ್ಪ ತಳವಾರ, ಅಪ್ಪಣಗೌಡ, ಶಿವು ಬಾಚವಾರ, ಕುಮಾರ, ಲಚ್ಚು ಚವಾಣ್, ಶಂಕರ ಚವಾಣ್, ಅಶೋಕ ಚವಾಣ್, ಗೋಪಾಲ, ಕಿರಣ್, ಕಿರಿಯ ಎಂಜಿನಿಯರ್ ಮರೆಪ್ಪ, ಪ್ರಮೋದರೆಡ್ಡಿ, ಉಮೇಶ ಇದ್ದರು. ಶಿಕ್ಷಕ ಶಿವರಾಜ ಪತ್ತಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.