ಶುಕ್ರವಾರ, ಮೇ 27, 2022
22 °C

ವಾಡಿ: ದೇವೀಂದ್ರ ಕರದಳ್ಳಿ ಪುರಸಭೆ ನೂತನ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಪಟ್ಟಣದ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದೇವಿಂದ್ರ ಕರದಳ್ಳಿ ಗೆಲುವು ಸಾಧಿಸುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟು 14 ಜನ ಸದಸ್ಯರು ಕೈ ಎತ್ತುವ ಮೂಲಕ ದೇವೀಂದ್ರ ಕರದಳ್ಳಿ ಆಯ್ಕೆಗೆ ಒಲವು ತೋರಿದರು.

ಪ್ರತಿಸ್ಪರ್ಧಿ ಬಿಜೆಪಿಯ ರವಿ ನಾಯಕ ಅವರಿಗೆ 7 ಮತಗಳು ಬಂದರೆ, ದೇವಿಂದ, ಕರದಳ್ಳಿ ಅವರಿಗೆ 14 ಜನ ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿದರು.

ತಿಮ್ಮಯ್ಯ ಪವಾರ ನಿಧನದಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ, ಸೋಮವಾರ ಮಧ್ಯಾಹ್ನ ಚುನಾವಣೆ ಜರುಗಿತು. ತಹಶೀಲ್ದಾರ್ ಉಮಾಕಾಂತ ಹಳ್ಳೆ ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಒಟ್ಟು 23 ಸದಸ್ಯರ ಸಂಖ್ಯಾಬಲ ಹೊಂದಿರುವ ಪುರಸಭೆಯಲ್ಲಿ 21 ಜನ ಚುನಾವಣೆ ಪ್ರಕ್ರಿಯೆಯದಲ್ಲಿ ಭಾಗಿಯಾದರೆ ಇಬ್ಬರು ಸದಸ್ಯರು ಗೈರು ಇದ್ದರು. ಬೆಳಿಗ್ಗೆ 9ಗಂಟೆಗೆ ನಾಮಪತ್ರ ಸಲ್ಲಿಕೆಯೊಂದಿಗೆ ಆರಂಭಗೊಂಡ ಚುನಾವಣೆ ಪ್ರಕ್ರಿಯೆ, ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಬಿಜೆಪಿ ಬೆಂಬಲಿತ ಸದಸ್ಯರಾದ ಸುಶೀಲಬಾಯಿ ಮೊಸಲಗಿ ಹಾಗೂ ಶೋಭಾ ಪವಾರ್ ಚುನಾವಣೆ ಸಭೆಗೆ ಗೈರಾಗಿದ್ದರು. ಶೋಭಾ ಪವಾರ್‌ ಅನಾರೋಗ್ಯ ನಿಮಿತ್ತ ಗೈರಾದರೆ, ಸುಶೀಲಬಾಯಿ ಮೌಸಲಗಿ ನಿಗದಿತ ಸಮಯಕ್ಕೆ ಬಾರದಿರುವುದ್ದರಿಂದ ಮತದಾನದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು