ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ದತ್ತಾತ್ರೇಯ ಮಹಾರಾಜರ ತೊಟ್ಟಿಲುತ್ಸವ ಕಾರ್ಯಕ್ರಮಕ್ಕೆ ಭಕ್ತರ ದಂಡು

Last Updated 18 ಡಿಸೆಂಬರ್ 2021, 6:03 IST
ಅಕ್ಷರ ಗಾತ್ರ

ಕಲಬುರಗಿ: ಅಫಜಲಪುರ‌ ತಾಲ್ಲೂಕಿನ‌ ದೇವಲ ಗಾಣಗಾಪುರದಲ್ಲಿ ದತ್ತ ಜಯಂತಿ ನಿಮಿತ್ತ ದತ್ತಾತ್ರೇಯ ಮಹಾರಾಜರ ತೊಟ್ಟಿಲುತ್ಸವ ಕಾರ್ಯಕ್ರಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

ಕೋವಿಡ್ ಕಾರಣ ಜಿಲ್ಲಾಡಳಿತವು ಭಾನುವಾರ ನಡೆಯಬೇಕಿದ್ದ ರಥೋತ್ಸವವನ್ನು ರದ್ದುಗೊಳಿಸಿದೆ. ಅರ್ಚಕರ ಸಮ್ಮುಖದಲ್ಲಿ ತೊಟ್ಟಿಲುತ್ಸವಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ದತ್ತ ಜಯಂತಿ ನಿಮಿತ್ತ ಬೆಳಗಿನಜಾವ ಎರಡು ಗಂಟೆಯಿಂದಲೇ ಪೂಜಾ ಕಾರ್ಯಕ್ರಮಗಳು ಅರಂಭವಾಗಿವೆ.

ಬೆಳಗ್ಗೆ ಕಾಕಡಾರತಿ, ಕೇಸರ ಲೇಪನ, ಲಘು ರುದ್ರಾಭಿಷೇಕ, ಮಹಾಪೂಜೆಯ ನಂತರ ದತ್ತಾತ್ರೇಯ ಮಜಾರಾಜರ ನಿರ್ಗಿಣ ಪಾದುಕೆಗಳ ದರ್ಶನಕ್ಕೆ‌ ಅವಕಾಶ ನೀಡಲಾಯಿತು.

ದತ್ತ ಜಯಂತಿ ನಿಮಿತ್ತ ದತ್ತಾತ್ರೇಯ ಮಹಾರಾಜರ ತೊಟ್ಟಿಲುತ್ಸವ ಕಾರ್ಯಕ್ರಮ
ದತ್ತ ಜಯಂತಿ ನಿಮಿತ್ತ ದತ್ತಾತ್ರೇಯ ಮಹಾರಾಜರ ತೊಟ್ಟಿಲುತ್ಸವ ಕಾರ್ಯಕ್ರಮ

ಮಧ್ಯಾಹ್ನ 12 ಗಂಟೆಗೆ ತೊಟ್ಟಿಲುತ್ಸವ ಕಾರ್ಯಕ್ರಮ ನಡೆಯಲಿದೆ. ಗುರುಗಳ ದರ್ಶನಕ್ಕೆ ಭಕ್ತರು ಸರತಿಯಲ್ಲಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT