ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ: ವ್ಯಕ್ತಿ ಸತ್ತು ಹತ್ತು ತಾಸಾದರೂ ಗಮನಿಸದ ಸಿಬ್ಬಂದಿ’

Last Updated 8 ಮೇ 2021, 5:16 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ಎರಡನೇ ಮಹಡಿಯ ಕೋವಿಡ್‌ ವಾರ್ಡ್‌ನಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟು ಹತ್ತು ಗಂಟೆಗಳಾದರೂ ಯಾವುದೇ ಸಿಬ್ಬಂದಿ ಗಮನಿಸಿಲ್ಲ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ನಾಲವಾರ ನಿವಾಸಿ ಹಫೀಜ್ ಬೇಗ್‌ ಕೋವಿಡ್‌ನಿಂದ ಮೃತಪಟ್ಟವರು. ತೀವ್ರ ಉಸಿರಾಟದ ತೊಂದರೆಯ ಕಾರಣ ಅವರು ಕೋವಿಡ್‌ ವಾರ್ಡ್‌ನ ಐಸಿಯು ವಾರ್ಡ್‌ನಲ್ಲಿ ದಾಖಲಾಗಿದ್ದರು. ಮೇ 5ರಂದು ತಡರಾತ್ರಿ 2ರ ಸುಮಾರಿಗೆ ಅವರು ಪ್ರಾಣ ಬಿಟ್ಟಿದ್ದಾರೆ. ಆದರೂ ಮಾರನೇ ದಿನ ಮಧ್ಯಾಹ್ನ 12ರವರೆಗೂ ಅವರ ಬಳಿ ಯಾರೂ ಬಂದಿಲ್ಲ. ಹಾಗಾಗಿ, ವ್ಯಕ್ತಿ ಮೃತಪಟ್ಟ ಸುದ್ದಿಯೇ ಸಂಬಂಧಿಕರಿಗೆ 12 ತಾಸುಗಳ ಬಳಿಕ ಸಿಕ್ಕಿದೆ.

ಹಫೀಜ್‌ ಬೇಗ್‌ ಅವರು ಮೃತಪಟ್ಟ ಬಗ್ಗೆ ಅವರ ಪಕ್ಕದ ಬೆಡ್‌ನ ಇನ್ನೊಬ್ಬ ಸೋಂಕಿತ ವ್ಯಕ್ತಿ ಮಾವನ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ರಿಯಾಜ್ ಖತೀಬ್ ಎಂಬುವವರಿಗೆ ಫೋನ್‌ ಮಾಡಿ ತಿಳಿಸಿದ್ದರು.‌

ಹಫೀಜ್‌ ಅವರು ಆಸ್ಪತ್ರೆಗೆ ಬಂದು ಮೃತನ ಕುಟುಂಬದವರು ಹಾಗೂ ವೈದ್ಯರ ಜತೆಗೆ ಮಾತನಾಡಿದ ಶವ ಹಸ್ತಾಂತರಿಸಿದರು.

‘ಜಿಮ್ಸ್‌ನಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಪ್ರಾಣ ಹೋಗಿ, ದೇಹವು ಬಾತುಕೊಂಡಿದ್ದರೂ ಯಾರೂ ಕಣ್ಣೆತ್ತಿ ನೋಡಿಲ್ಲ’ ಎಂದು ಹಫೀಜ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT