ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮೂವರಿಗೆ ಗುಲಬರ್ಗಾ ವಿವಿ ಗೌರವ ಡಾಕ್ಟರೇಟ್

Published 18 ಜೂನ್ 2023, 5:45 IST
Last Updated 18 ಜೂನ್ 2023, 5:45 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯವು ಕಲಬುರಗಿಯ ಶಿಲ್ಪ ಕಲಾವಿದ ಮಾನಯ್ಯ ಬಡಿಗೇರ, ಬೀದರ್‌ ಜಿಲ್ಲೆ ಬಸವ ಕಲ್ಯಾಣದ ಸಾಹಿತಿ ತಾತ್ಯಾರಾವ್ ಕಾಂಬಳೆ ಹಾಗೂ ಬೆಂಗಳೂರು ಮೂಲದ ವಿಜ್ಞಾನಿ ಶ್ರೀನಾಥ ಡಿ.ಎನ್. ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ.

‘ಇದೇ 19ರಂದು ವಿ.ವಿ. ಆವರಣದಲ್ಲಿ ನಡೆಯಲಿರುವ 41ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿ.ವಿ. ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗಣ್ಯರಿಗೆ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡುವರು. ಒಟ್ಟಾರೆ 14 ಗಣ್ಯರ ಹೆಸರುಗಳನ್ನು ಗೌರವ ಡಾಕ್ಟರೇಟ್‌ ಪದವಿಗೆ ಸಿಂಡಿಕೇಟ್ ಸಭೆ ಶಿಫಾರಸು ಮಾಡಿತ್ತು. ಅದರಲ್ಲಿ ಮೂವರಿಗೆ ನೀಡಲು ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

165 ಚಿನ್ನದ ಪದಕ

ಈ ಬಾರಿಯ ಘಟಿಕೋತ್ಸವದಲ್ಲಿ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. 129 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ. ಪದವಿ ಪ್ರದಾನ ಮಾಡಲಾಗುವುದು. ಒಟ್ಟಾರೆ 30,761 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ.

ತಾತ್ಯಾರಾವ್ ಕಾಂಬಳೆ
ತಾತ್ಯಾರಾವ್ ಕಾಂಬಳೆ
ಶ್ರೀನಾಥ ಡಿ.ಎನ್.
ಶ್ರೀನಾಥ ಡಿ.ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT