ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರದಾನ

Published 14 ಡಿಸೆಂಬರ್ 2023, 13:16 IST
Last Updated 14 ಡಿಸೆಂಬರ್ 2023, 13:16 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸಿ.ಆರ್.ಚಂದ್ರಶೇಖರ ಸ್ನೇಹ ಬಳಗ, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ ವತಿಯಿಂದ ಸಿ.ಆರ್.ಚಂದ್ರಶೇಖರ 75ನೇ ಜನ್ಮದಿನದ ಪ್ರಯುಕ್ತ ವರ್ಷಪೂರ್ತಿ ಆರೋಗ್ಯ ಅರಿವಿನ ಕಾರ್ಯಚಟುವಟಿಕೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಡಾ.ಎಸ್.ಎಸ್.ಪಾಟೀಲ ಸ್ಮಾರಕ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. 

ಡಾ.ಪಿ.ಎಂ.ಬಿರಾದಾರ, ಡಾ.ಉದಯ ಪಾಟೀಲ, ಡಾ.ವಿಶ್ವನಾಥರೆಡ್ಡಿ, ಡಾ.ಸಂಗ್ರಾಮ ಬಿರಾದಾರ, ಡಾ.ಶಿವಕುಮಾರ ಸಿ.ಆರ್ ಅವರಿಗೆ ಡಾ.ಎಸ್.ಎಸ್.ಪಾಟೀಲ ಸ್ಮಾರಕ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಿ.ಆರ್.ಚಂದ್ರಶೇಖರ ಸ್ನೇಹ ಬಳಗದ ಗೌರವಾಧ್ಯಕ್ಷ ಡಾ.ನಾ.ಸೋಮೇಶ್ವರ ಮಾತನಾಡಿ, ‘ಎಸ್.ಎಸ್.ಪಾಟೀಲ ವೃತ್ತಿಯಿಂದ ವೈದ್ಯರಾಗಿದ್ದರೂ ಮಾನವೀಯತೆ ಹೊಂದಿದವರು, ಶ್ರೇಷ್ಠ ಸಾಹಿತಿಗಳು, ಬಸವಣ್ಣನವರ ವಚನಗಳನ್ನು ಸರಳ ವಿವರಣೆಯನ್ನು ನೀಡಿ ಸಾರ್ಥಕ ಭಾವನೆ ಹೊಂದಿದರು. ಡಾ.ಸಿ.ಆರ್. ಚಂದ್ರಶೇಖರ ಅವರು ಕನ್ನಡದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಾಕಷ್ಟು ಪುಸ್ತಕ ಬರೆದಿದ್ದಾರೆ. ಮಾನಸಿಕ ಕಾಯಿಲೆ ಬರುವ ಮೊದಲೇ ಎಚ್ಚರಿಸಿದ್ದಾರೆ. ವೃತ್ತಿ ಜೀವನದಲ್ಲಿ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಅನೇಕ ವೈದ್ಯರಿಗೆ ಲೇಖನ ಬರೆಯಲು ಪ್ರೇರಣೆ ನೀಡಿದ್ದಾರೆ‘ ಎಂದರು.

ಡಾ.ಸಿ.ಆರ್. ಚಂದ್ರಶೇಖರ ಮಾತನಾಡಿ, ‘ದೇವರಲ್ಲಿ ಹಣ, ಅಧಿಕಾರ, ಆಸ್ತಿ, ಕೇಳಬಾರದು. ಆರೋಗ್ಯ ಭಾಗ್ಯ ಕೊಡು ಎಂದು ಪ್ರಾರ್ಥಿಸಬೇಕು. ಕರ್ನಾಟಕದಲ್ಲಿ ಒಂದುವರೆ ಲಕ್ಷ ಜನ ವೈದ್ಯರಿದ್ದರೂ ಆ ಕ್ಷಣಕ್ಕೆ ಬೇಕಾಗುವ ಚಿಕಿತ್ಸೆ ನೀಡುವ ವೈದ್ಯರೂ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಮಹತ್ವ ನೀಡಿದಂತೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು‘ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಯೋಜಕ ಮತ್ತು ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಎಸ್.ಎಸ್.ಗುಬ್ಬಿ, ಎಸ್.ಎಸ್.ಹಿರೇಮಠ, ಹೆಚ್‌ಕೆಇ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಕಲಾವಿದ ವೈ.ವಿ.ಗುಂಡೂರಾವ, ಡಾ. ಎಸ್.ಸಿ. ದೇಸಾಯಿ, ಪ್ರಾಚಾರ್ಯ ಎಂ.ಸಿ.ಕಿರೇದಳ್ಳಿ, ಪ್ರಶಾಂತ ಕುಲಕರ್ಣಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಡಾ. ಶಶಿಶೇಖರ ರಡ್ಡಿ, ಡಾ. ಬಿ.ಎಸ್. ದೇಸಾಯಿ, ವಿದ್ಯಾರ್ಥಿನಿ ಶರಣಮ್ಮ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಮುಖರು ಇದ್ದರು.

ಸಸ್ತಾಪುರದ ಕಲಾ ಕುಟೀರ ಟ್ರಸ್ಟ್ ಮತ್ತು ಕಲಬುರಗಿ ಜನರಂಗ ತಂಡದವರು ‘ನಾನು ಅಲ್ಬರ್ಟ್ ಐನ್‌ಸ್ಟಿನ್’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT