ಕಲಬುರಗಿ: ‘ಸ್ಮಾರ್ಟ್ ಸಾರಿಗೆ, ವಿದ್ಯುತ್ ಚಾಲಿತ ವಾಹನಗಳು ಭಾರತದ ಸಾರಿಗೆ ವ್ಯವಸ್ಥೆಯ ಭವಿಷ್ಯ’ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಒಂದು ವಾರದ ಅಟಲ್ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ,‘ಮುಂದಿನ ದಿನಗಳಲ್ಲಿ ಇವು ಭಾರತ ದೇಶವನ್ನು ನಡೆಸುವ ಚಾಲಕ ಶಕ್ತಿಯಾಗಲಿವೆ’ ಎಂದರು.

ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಅಮರೇಂದ್ರ ಮತ್ಸ ಮಾತನಾಡಿ,‘ದೇಶದಾದ್ಯಂತ ವಿವಿಧ ಸಂಸ್ಥೆಗಳ ಅಧ್ಯಾಪಕರು, ಸಂಶೋಧಕರು ಮತ್ತು ವೃತ್ತಿಪರರು ಸೇರಿದಂತೆ ಒಟ್ಟು 60 ಜನ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ’ ಎಂದು ಹೇಳಿದರು.

ಡಿಬಿಎಸ್ ಬ್ಯಾಂಕ್ನ ಮೆಷಿನ್ ಲರ್ನಿಂಗ್ ಎಂಜಿನಿಯರಿಂಗ್ನ ಹಿರಿಯ ಉಪಾಧ್ಯಕ್ಷ ಟಿ.ಸೀತಾರಾಮ್ ಮಾತನಾಡಿದರು.

ಎಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ.ಪರಮೇಶ, ಮೋದಿ ಪಾಂಡುರಂಗ ಪ್ರಸಾದ್, ಉದಯ ಪಾಟೀಲ, ಸುಧೀರ, ಸಂತೋಷ ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಅರುಣಕುಮಾರ ಪಾಟೀಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.