‘ಡಿಜಿಟಲ್ ಪೇಮೆಂಟ್‌ಗೆ ಅನುಕೂಲ’
‘ಒಂದೆರಡು ತಿಂಗಳಲ್ಲಿ ಸ್ಮಾರ್ಟ್ ಇಟಿಎಂ ಬಳಕೆ ಕಾರ್ಯರೂಪಕ್ಕೆ ಬರಲಿದೆ. ಕ್ಯೂಆರ್‌ಕೋಡ್‌ನಿಂದ ಡಿಜಿಟಲ್ ಪೇಮೆಂಟ್‌ಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಭಾಗದಲ್ಲಿ ಕಡಿಮೆ ಡಿಜಿಟಲ್ ಪಾವತಿ ಬಳಕೆದಾರರು ಇದ್ದರೂ ಇಟಿಎಂ ಅನ್ನು ಎಲ್ಲ ಬಸ್‌ಗಳಲ್ಲಿ ಜಾರಿಗೆ ತರುತ್ತೇವೆ. ಸ್ಮಾರ್ಟ್ ಯಂತ್ರಗಳನ್ನು ಬಳಕೆಗೆ ತರುವ ಚಿಂತನೆ ಬಹಳ ದಿನಗಳಿಂದ ಇತ್ತು. ಆದರೆ ಪ್ರಸ್ತುತ ಬಳಕೆಯಲ್ಲಿರುವ ಬಿಲ್ಲಿಂಗ್ ಮಷಿನ್‌ಗಳ ಅವಧಿ ಮುಗಿಯುವವರೆಗು ಬರುವುದಿಲ್ಲ ಎಂದರು. ಹೀಗಾಗಿ ಸ್ವಲ್ಪ ವಿಳಂಬವಾಗಿದೆ. ಉತ್ತಮ ಫೀಚರ್‌ಗಳೊಂದಿಗೆ ಪ್ರಯಾಣಿಕ ಸ್ನೇಹಿ ಇಟಿಎಂಗಳು ಸೇವೆಗೆ ಲಭ್ಯವಾಗಲಿವೆ’ ಎಂದರು.