ಅಫಜಲಪುರ: ಇಲ್ಲಿನ ಬಸ್ ಘಟಕದಲ್ಲಿ ಕಳೆದ 13 ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ನಾಗಪ್ಪ ಉಪ್ಪಿನ್ ಅವರು ಕಳೆದ 12 ವರ್ಷಗಳಿಂದ ನ.1ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಮ್ಮ ಸ್ವಂತ ಖರ್ಚಿನಿಂದ ಬಸ್ಸಿಗೆ ಶೃಂಗಾರ ಮಾಡುತ್ತಾರೆ. ಕನ್ನಡಾಭಿಮಾನ ಮೆರೆಯುತ್ತಿರುವ ಉಪ್ಪಿನ್ ಅವರನ್ನು ಮಣ್ಣೂರು ಗ್ರಾಮದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕದ ಜಿಲ್ಲೆಗಳ ಜೊತೆಗೆ ಪ್ರವಾಸಿ ತಾಣಗಳ ಚಿತ್ರಗಳು, ಪ್ರಮುಖ ಕವಿಗಳು, ಮಹಾಪುರುಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು ಸೇರಿ ಬಸ್ ಸಂಪೂರ್ಣ ಕನ್ನಡಮಯವಾಗಿಸಿದ್ದಾರೆ. ನಾಗಪ್ಪ ಅವರ ಈ ಕನ್ನಡ ಪ್ರೇಮ ಮೆಚ್ಚಿ ಮಣ್ಣೂರ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿರ್ವಾಹಕ ಸೂರ್ಯಕಾಂತ ಮಗಿ, ತಾಂತ್ರಿಕ ಸಿಬ್ಬಂದಿ ಅಶೋಕ ಬೇನೂರ, ಗ್ರಾ.ಪಂ ಸದಸ್ಯ ಬಸವರಾಜ ವಾಯಿ, ಮುಖಂಡರಾದ ಅಪ್ಪಾಸಾಬ ಹೊಸೂರಕರ, ಚಂದಪ್ಪ ಹಿರೇಕುರುಬರ, ಚಂದ್ರಕಾಂತ ದೈತನ, ಸಿದ್ದಪ್ಪ ಹುಂಡೇಕಾರ, ಮಹಾದೇವ ಪ್ಯಾಟಿ, ಮಲ್ಲಪ್ಪ ಗೋಪಗೊಂಡ, ರಾಜಶೇಖರ ಪ್ಯಾಟಿ, ಮಹಿಮೂದ ಡಾಂಗೆ, ಗಂಗಾಧರ ಸಂಖ, ಅಂಬಣ್ಣ ಉಡಗಿ, ಅಶೋಕ ಸಂಬಾಳೆ, ಯಲ್ಲಪ್ಪ ಹಡಪದ, ಮಲ್ಲಪ್ಪ ಜಮಾದಾರ, ಭಾಗೇಶ ಪ್ಯಾಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.