ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ

Last Updated 30 ಮೇ 2021, 9:41 IST
ಅಕ್ಷರ ಗಾತ್ರ

ಕಲಬುರ್ಗಿ: ಎಲ್ಲಾ ಕ್ಷೇತ್ರದಲ್ಲಿ ದುಡಿಯುವವರಿಗೆ ಒಂದು ದಿನ ರಜೆ ಇದೆ. ಆದರೆ ಈ ಭೂಮಿಯ ಮೇಲೆ ನಿರಂತರವಾಗಿ ದುಡಿಯುವ ಮಹಿಳೆಯರಿಗೆ ರಜೆ ಎಂಬುದೇ ಇಲ್ಲ. ಹಾಗಾಗಿ ಮಹಿಳೆಯರು ದಿನನಿತ್ಯದ ಮನೆ ಕೆಲಸದ ಒತ್ತಡದ ಮಧ್ಯೆಯೂ ಸಮಯಕ್ಕೆ ಅನುಗುಣವಾಗಿ ವಿಶ್ರಾಂತಿ ತೆಗೆದುಕೊಳ್ಳಲೇಬೇಕು’ ವೈದ್ಯೆ ಡಾ.ವರಲಕ್ಷ್ಮಿ ಹತ್ತಿ ಅಭಿಪ್ರಾಯಪಟ್ಟರು.

ಕುಸನೂರ ರಸ್ತೆಯ ತಿಲಕ್ ನಗರದಲ್ಲಿ ಪ್ರಿಯಾಂಕ್–ಅಮಿತ್ ನಾಗಶೆಟ್ಟಿ ಮರಪಳ್ಳಿ ಮದುವೆ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ದುಡಿಯುವ ದೇಹಕ್ಕೆ ವಿಶ್ರಾಂತಿ ಅಗತ್ಯ. ಅನಾರೋಗ್ಯ ಆದಾಗ ಚಿಕ್ಸಿತೆ ತೆಗೆದುಕೂಳ್ಳುವುದಕಿಂತ ಮೊದಲೇ ಆರೋಗ್ಯದ ಕಡೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯ’ ಎಂದರು.

ಈ ಸಂದರ್ಭದಲ್ಲಿ ಡಾ.ವರಲಕ್ಷ್ಮಿ ಹತ್ತಿ, ನರ್ಸ್‌ ಇಂದುಮತಿ ಹಾಗೂ ಪಿಎಸ್ಐ ಭೀಮರಾವ ನಾಶಿ ಅವರನ್ನು ಸನ್ಮಾನಿಸುವ ಮೂಲಕ ‘ವಿಶ್ವ ಮಹಿಳಾ ಆರೋಗ್ಯ ದಿನ’ವನ್ನು ಆಚರಿಸಲಾಯಿತು ಎಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.

ವಿನೇೂದಕುಮಾರ ಜೇನೆವೆರಿ, ರಾಜಶೇಖರ ಮರಪಳ್ಳಿ, ರವೀಂದ್ರ ಮೈಲಾರಿ, ಮಲ್ಲುಗೌಡ, ರವಿ ಮರಪಳ್ಳಿ, ಷಣ್ಮುಖ ಪಾಟೀಲ, ಬಸವರಾಜ ಕೊಳಕೂರ, ಶೇಖರ ಮರಪಳ್ಳಿ, ಶಿವಕುಮಾರ ಮರಪಳ್ಳಿ, ವೀರೇಶ, ಅಪ್ಪೂ, ವಿಕಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT