ಮೂರು ಕುಟುಂಬಕ್ಕೆ ಒಬ್ಬರೇ ಗಂಡು ಮಕ್ಕಳು:
ಮೃತ ನಾಲ್ವರ ಕಟುಂಬದಲ್ಲಿ ಪ್ರಕಾಶ ಪೂಜಾರಿ ಎಂಬಾತನಿಗೆ ಒಬ್ಬ ಅಣ್ಣನಿದಿದ್ದು ಬಿಟ್ಟರೆ ಮಲ್ಲಿಕಾರ್ಜುನ ಪೂಜಾರಿ ಸುರೇಶರೆಡ್ಡಿ ಮತ್ತು ಸಿದ್ದಪ್ಪ ಗುಡಿಸಿ ಅವರು ಕುಟುಂಬದಲ್ಲಿ ಒಬ್ಬೋಬ್ಬರೇ ಮಕ್ಕಳು. ಮೃತ ಪ್ರಕಾಶ ಪೂಜಾರಿಯ ತಂದೆ ತಿಪ್ಪಣ್ಣ ಪೂಜಾರಿ ಅವರು ಕುಂಭಮೇಳ ಹಾಗೂ ಪ್ರಯಾಗ್ ರಾಜ್‌ಗೆ ತೆರಳಿದ್ದರು. ಅಲ್ಲಿಂದ ನೇರವಾಗಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ಶನಿವಾರ ರಾತ್ರಿ ಗ್ರಾಮಕ್ಕೆ ಮರಳಿದ ನಂತರ ಪುತ್ರನ ಅಂತ್ಯಕ್ರಿಯೆ ಜರುಗಿತು. ಮೃತರ ನಾಲ್ವರ ಪೈಕಿ ಸಿದ್ದಪ್ಪ ಗುಡಿಸಿ ಅಂತ್ಯಕ್ರಿಯೆ ಶುಕ್ರವಾರ ಜರುಗಿದರೆ ಸುರೇಶ ರೆಡ್ಡಿ ಪ್ರಕಾಶ ಪೂಜಾರಿ ಮತ್ತು ಮಲ್ಲಿಕಾರ್ಜುನ ಪೂಜಾರಿ ಅವರ ಅಂತ್ಯಕ್ರಿಯೆ ಶನಿವಾರ ಜರುಗಿತು.