ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ರೈತ ಆತ್ಮಹತ್ಯೆ

Published 12 ಮಾರ್ಚ್ 2024, 16:14 IST
Last Updated 12 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಕೊಡದೂರ ಗ್ರಾಮದಲ್ಲಿ ಮಂಗಳವಾರ ರೈತ ಮಲ್ಲಿಕಾರ್ಜುನ ಬಸಪ್ಪ ಮುಂದಿನಮನಿ (46) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದಾರೆ.

ಒಟ್ಟು 3.59 ಎಕರೆ ಜಮೀನು ಇರುವ ರೈತ ಮಲ್ಲಿಕಾರ್ಜುನ ಬೇಸಾಯಕ್ಕಾಗಿ ಕಾಳಗಿ ಭಾರತೀಯ ಸ್ಟೇಟ್ ಬ್ಯಾಂಕ್‌ ಮತ್ತು ಖಾಸಗಿಯಾಗಿ ಸಾಲ ಮಾಡಿದ್ದರು.

‘ಬೆಳೆ ನಷ್ಟವಾದ ಪರಿಣಾಮ ಸಾಲ ತೀರಿಸಲಾಗದೆ ನನ್ನ ಗಂಡ ನೇಣಿಗೆ ಶರಣಾಗಿದ್ದಾರೆ’ ಎಂದು ಪತ್ನಿ ಶಾಂತಮ್ಮ ನೀಡಿದ ದೂರಿನನ್ವಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಪಿಎಸ್ಐ ಅಮೋಜ್ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT